Ad imageAd image

ಒಳ ಮೀಸಲಾತಿ ವರ್ಗಿಕರಣ ವಿಳಂಬ.! ಸಚಿವ – ಶಾಸಕರ ಮನೆ ಮುಂದೆ ತಮಟೆ ಚಳುವಳಿ.!

Bharath Vaibhav
ಒಳ ಮೀಸಲಾತಿ ವರ್ಗಿಕರಣ ವಿಳಂಬ.!  ಸಚಿವ – ಶಾಸಕರ ಮನೆ ಮುಂದೆ  ತಮಟೆ ಚಳುವಳಿ.!
WhatsApp Group Join Now
Telegram Group Join Now

ಸಿಂಧನೂರು : ಮಾದಿಗ ಮತ್ತು ಮಾದಿಗ ಉಪಜಾತಿಗಳ ಒಕ್ಕೂಟ ವತಿಯಿಂದ 14.12.2024 ರಂದು ರಾಯಚೂರು ನಗರದ ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ತಮಟೆ ಚಳವಳಗೆ ಚಾಲನೆ ನೀಡಿ ಒಳ ಮೀಸಲಾತಿ ವರ್ಗೀಕರಣ ವಿಷಯದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ ನಗರದಲ್ಲಿರುವ ಸಚಿವ ಎನ್.ಎಸ್. ಬೋಸರಾಜ್, ಹಾಗೂ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್, ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ. ವಸಂತಕುಮಾರ್ ರವರ ಮನೆಗೆ ತಮಟೆ ಚಳುವಳಿ ಮುಖಾಂತರ ತೆರಳಿ ಮನವಿ ಪತ್ರ ಸಲ್ಲಿಸಿ ನೀವುಗಳು ಶಾಸಕರಾಗಲು ನಮ್ಮ ಮಾದಿಗ ಮತ್ತು ಮಾದಿಗ ಉಪಜಾತಿ ಸಮುದಾಯಗಳು ಬಹು ಮುಖ್ಯವಾದ ಪಾತ್ರವಹಿಸಿದೆ ಪ್ರಸ್ತುತ ಈಗ ನಡೆಯುತ್ತಿರುವ ಬೆಳಗಾವಿ ಅಧಿವೇಶನದ ಸದನದಲ್ಲಿ ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಧ್ವನಿ ಎತ್ತಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ರಾಯಚೂರು ಜಿಲ್ಲೆಯ ಸಚಿವ ಮತ್ತು ಶಾಸಕರ ಮನೆಗೆ ತಮಟೆ ಚಳುವಳಿ ಮುಖಾಂತರ ನೂರಾರು ಮಾದಿಗ ಮತ್ತು ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ,

ಮಾದಿಗ ಸಂಘಟನೆಗಳ ಮುಖಂಡರಾದ ಬಿ. ನರಸಪ್ಪ ದಂಡೋರ, ಪಿ. ಯಲ್ಲಪ್ಪ, ರವೀಂದ್ರ ಜಾಲ್ದಾರ್, ನಾಗರಾಜ್ ದೇವ ನಗರ, ಶಂಶಾಲಂ, ಭೀಮಣ್ಣ, ಪರಂಗಿ ತಿಮ್ಮಪ್ಪ, ಸುಭಾಷ್ ಆಸ್ಕಿಹಾಳ, ಆರ್. ಆಂಜನೇಯ, ಕೆ. ಕೃಷ್ಣ, ಬ್ರಹ್ಮಯ್ಯ ಇನ್ನಿತರ ಭಾಗವಹಿಸಿದ್ದರು

ಬಸವರಾಜ ಬುಕ್ಕನಹಟ್ಟಿ,

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!