ಹುಬ್ಬಳ್ಳಿ : ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಡಿಸೇಲ್ ತುಂಬಿ ಸಾಗುತ್ತಿದ್ದ ಟ್ಯಾಂಕರ್ ಗೆ ಟ್ರಕ್ ಡಿಕ್ಕಿಯಾಗಿದೆ. ನವಲಗುಂದ ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಡಿಸೇಲ್ ಟ್ಯಾಂಕರ್ ಗೆ ಹಿಂಬದಿಯಿಂದ ಟ್ರಕ್ ಗುದ್ದಿದೆ.
ಟ್ಯಾಂಕರ್ ನಲ್ಲಿದ್ದ ಡಿಸೇಲ್ ಭಾಗಶಃ ಸುರಿದಿದ್ದು, ಸುತ್ತಮುತ್ತಲಿನ ನಿವಾಸಿಗಳು ಬಾಟಲ್ ಗಳಲ್ಲಿ ಡಿಸೇಲ್ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಇನ್ನು, ಟ್ಯಾಂಕರ್ ಡ್ರೈವರ್ ಅನ್ನು ಸ್ಥಳೀಯರು ಶ್ರಮಪಟ್ಟು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಡಿಸೇಲ್ ಟ್ಯಾಂಕ್ ಲೀಕ್ ಆಗಿರುವ ಪರಿಣಾಮ ಅಪಘಾತದ ಜಾಗದಲ್ಲಿ ಆತಂಕ ಮನೆ ಮಾಡಿತ್ತು. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.




