Ad imageAd image

ತನು ಮನ ಧರ್ಮ ಆರಿತವನೇ ನಿಜವಾದ ಲಿಂಗಾಯತ: ಪ್ರೊಫೆಸರ್ ರಾಜಶೇಖರ್ ತಂಬಾಕೆ ಅಭಿಮತ

Bharath Vaibhav
ತನು ಮನ ಧರ್ಮ ಆರಿತವನೇ ನಿಜವಾದ ಲಿಂಗಾಯತ: ಪ್ರೊಫೆಸರ್ ರಾಜಶೇಖರ್ ತಂಬಾಕೆ ಅಭಿಮತ
WhatsApp Group Join Now
Telegram Group Join Now

ಶ್ರೀ ಕ್ಷೇತ್ರ ಅಲ್ಲಮಗಿರಿಯಲ್ಲಿ 20ನೇ ಲಿಂಗಾಯತ ಗಣ ಮೇಳಕ್ಕೇ ಚಾಲನೆ

ನಿಪ್ಪಾಣಿ: ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪವೆಂಬ ಶೂನ್ಯ ಪೀಠ ಸ್ಥಾಪಿಸಿ ವ್ಯುಮ, ಕಾಯ ,ಸಿದ್ದಿ ಈರುವ ಅಲ್ಲಮಪ್ರಭುದೇವರನ್ನು ಪ್ರಥಮ ಪೀಠಾಧಿಕಾರಿಯನ್ನಾಗಿಸಿದರು. ವಿಶ್ವದಲ್ಲಿ ಸಮಾನತೆಗೆ ಶ್ರಮಿಸಿದ ಬಸವಣ್ಣನವರ ವಚನ ಸಾಹಿತ್ಯವನ್ನು ಎಲ್ಲ ಶರಣರು ಅರಿತು ತನು ಮನ ಧರ್ಮದ ತಿರುಳನ್ನು ಅರಿತವನೇ ನಿಜವಾದ ಲಿಂಗಾಯತ ವೆಂದು ಪ್ರೊಫೆಸರ್ ರಾಜಶೇಖರ್ ತಂಬಾಕೆ ತಿಳಿಸಿದರು ಅವರು ಶ್ರೀ ಕ್ಷೇತ್ರ ಅಲ್ಲಮಗಿರಿಯ ಯೋಗ ಪೀಠದಲ್ಲಿ ನಡೆಯುತ್ತಿರುವ 20ನೇ ಲಿಂಗಾಯತ ಗಣ ಮೇಳದ ಮೊದಲ ದಿನದ ಸಮಾರಂಭದಲ್ಲಿ ಮಾತನಾಡಿದರು.

ಬೆಳಿಗ್ಗೆ ಕೂಡಲಸಂಗಮ ಬಸವಪೀಠಾಧ್ಯಕ್ಷೆ ಡಾಕ್ಟರ್ ಗಂಗಾಮತಿ ಮಾತಾಜಿ ಹಾಗೂ ಅಲ್ಲಮಪ್ರಭು ಯೋಗ ಪೀಠದ ಬಸವ ಕುಮಾರಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಧಾರವಾಡದ ಜ್ಞಾನೇಶ್ವರಿ ಮಾತಾಜಿ ಬಸವ ರತ್ನ ಮಾತಾಜಿ ಚಿತ್ರದುರ್ಗದ ವಿಜಯ ಅಂಬಿಕಾ ಹೈದರಾಬಾದ ಅನಿಮಿಷಾನಂದ ಸ್ವಾಮಿ ಉಳಿವಿ ಪೀಠದ ದಾನೇಶ್ವರಿ ಮಾತಾಜಿ ಚನ್ನಬಸವರಾಜ್ ಸ್ವಾಮಿ ಬಸವಪ್ರಕಾಶ ಸ್ವಾಮಿಯವರ ಮುಖ್ಯ ಉಪಸ್ತಿತಿಯಲ್ಲಿ ಎರಡು ದಿನಗಳವರೆಗೆ ನಡೆಯಲಿರುವ ಲಿಂಗಾಯತ ಗಣ ಮೇಳದ ಮೊದಲ ದಿನ ಬೆಳಿಗ್ಗೆ ಸಾವಿರಾರು ಶರಣೀಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಉಪಾಸನೆ ಧರ್ಮ ಗುರು ಪೂಜೆ ಪ್ರಾರ್ಥನೆ ಹಾಗೂ ಧರ್ಮಧ್ವಜಾರೋಹನ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ಕೊಲ್ಲಾಪುರದ ಯಶ್ ಅಂಬೋಲಿ ಹಾಗೂ ರಾಜಶೇಖರ್ ತಂಬಾಕೆ ಅವರಿಂದ ವಿಚಾರಗೋಷ್ಠಿ ನಡೆದವು. ಇದೇ ವೇಳೆಗೆ ಅಲ್ಲಮಗಿರಿ ಯೋಗ ಪೀಠದ ಅಧ್ಯಕ್ಷ ಬಸವಕುಮಾರ ಸ್ವಾಮಿ ಹಾಗೂ ಗಂಗಾಮತಿ ಅವರ ಹಸ್ತದಿಂದ ಶೈಕ್ಷಣಿಕ ರಂಗದಲ್ಲಿ ಶ್ಲಾಘನೀಯ ಕಾರ್ಯಗೈದ ವಿದ್ಯಾಮಂದಿರಗಳಿಗೆ ಮುಖ್ಯಾಧ್ಯಾಪಕ ಶಿಕ್ಷಕರು ಆಡಳಿತ ಮಂಡಳಿಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇದೇ ವೇಳೆಗೆ ಅನಿಕೇತ್ ಪಾಟೀಲರಿಂದ ಬಸವಣ್ಣನವರ ಚರಿತ್ರೆ ಸಾರುವ ಪವಾಡ ಗಾಯನ ನಡೆಯಿತು. ಲಿಂಗಾಯತ ಘನ ಮೇಳದ ಮೊದಲ ದಿನದ ಕಾರ್ಯಕ್ರಮದಲ್ಲಿ ಭೀಮರಾವ್ ಪಾಟೀಲ್ ಅವಿನಾಶ್ ಸೂರ್ಯವಂಶಿ ವಿನಾಯಕ ಪಲ್ಲೆ ಮನೋಜ್ ಕುಮಾರ್ ರನದಿವೆ, ಯೋಗೇಶ್ ಪಾಂಡವ ದತ್ತಾ ಕುಂಬಾರ, ಸರೋಜಿನಿ ಉರಣೆ ರಾಜು. ಶೇಣವಾಡೆ ಮಹೇಶ್ ತೊಡಕರ್ ಭರತ ಪಾಟೀಲ ಸೇರಿದಂತೆ ಕೊಲ್ಲಾಪುರ ಬೆಳಗಾವಿ ಜಿಲ್ಲೆಯ ಶರಣು ಶರಣೀಯರು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ

WhatsApp Group Join Now
Telegram Group Join Now
Share This Article
error: Content is protected !!