ಹುಕ್ಕೇರಿ : ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹುಕ್ಕೇರಿ ತಾಲೂಕಿನ ಕೊಟಬಾಗಿ ಹಾಗೂ ಗುಡಸ ಸಮೀಪದ ನೇರ್ಲಿ ತೋಟದಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಹುಕ್ಕೇರಿ ತಾಲೂಕಾ ವಿದ್ಯುತ್ ಸಹಕಾರಿ ಸಂಘದ ಸಹಯೋಗದೊಂದಿಗೆ ಅಳವಡಿಸಿದ ವಿದ್ಯುತ್ ಟಿಸಿಗಳಿಗೆ ಚಾಲನೆ ನೀಡಿದರು.
ಈ ವೇಳೆ ನೇರ್ಲಿ ತೋಟದಲ್ಲಿ ಸಾರ್ವಜನಿಕರಿಂದ ಸತ್ಕಾರ ಸ್ವೀಕರಿಸಿ, ಸುಮಾರು 20 ವರ್ಷಗಳ ತಾಲೂಕಿನ ಎಲ್ಲ ನಿರಂತರ ಜ್ಯೋತಿ ಬೇಡಿಕೆಗಳಿಗೆ ಈಗಿನ ವಿದ್ಯುತ್ ಸಹಕಾರಿ ಸಂಘ ಸ್ಪಂದಿಸುವ ಕಾರ್ಯ ನಡೆಸಿದೆ. ನಿಮ್ಮೆಲ್ಲರ ಆಶೀರ್ವಾದ ಈ ನೂತನ ಸಂಘದ ಸದಸ್ಯರ ಮೇಲೆ ಇರಬೇಕು. ಕೆಲಸ ಮಾಡುವವರಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ನಾಯಕರಾದ ರಾಹುಲ ಜಾರಕಿಹೊಳಿ ಅವರು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




