ಹೊಸಪೇಟೆ :– ಖಾಸಗಿ ಶಾಲೆ ಸಮಾನ. , ಸರ್ಕಾರಿ ಶಾಲೆಗಳ ಮಕ್ಕಳಿಗೂ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಹೇಳಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ 136ನೇ ಜಯಂತಿ ನಿಮಿತ್ತ ನಗರದ ಸ್ಥಳೀಯ ಸಾಯಿಲೀಲಾ ದೇವಸ್ಥಾನದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯ ನಿರ್ಮಾಣ ಮಾಡಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.ಮಕ್ಕಳು ಶಾಲೆಯಕ್ಕೆ ಬಂದಾಗ ಶಿಕ್ಷಕರು ಸಮಯ ವ್ಯರ್ಥ ಮಾಡದೆ ಅವರ ಭವಿಷ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಮಕ್ಕಳ ಬಗ್ಗೆ ಏನು ಮಾಡಬೇಕು ಎಂದು ನಿರ್ಧರಿಸಬೇಕು ಎಂದರು.
ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕೆಂದರು.
ನಂತರ ಜಿಲ್ಲಾ ಮಟ್ಟದ 15 ಉತ್ತಮ ಶಿಕ್ಷಕರ ಪ್ರಶಸ್ತಿ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು ಈ ಸಂದರ್ಭದಲ್ಲಿ ಶಾಸಕ ಗವಿಯಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ನೊಯಗಂ ಮೊಹಮ್ಮದ್ ಅಕ್ರಂ ಶಾ, ಹುಡಾ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ, ಜಿಲ್ಲಾ ಶಿಕ್ಷಣಾಧಿಕಾರಿ ಹನುಮಕ್ಕ, ಬಿಇಒ ಚೆನ್ನಭಸಪ್ಪ, ಹೊಸಪೇಟೆ ಜಿಲ್ಲಾ ಅಧಿಕಾರಿ ಶೇಖರ್ ಹೊರಪೇಟೆ , ಕುರಿ ಶಿವಮೂರ್ತಿ, ಶಿಕ್ಷಕರ ಸಂಘದ ಮುಖಂಡರು, ವಿವಿಧ ಶಾಲೆಗಳು, ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತಿತರರು ಭಾಗವಹಿಸಿದ್ದರು..
ವರದಿ : ಪಿ. ಶ್ರೀನಿವಾಸ್