ಧಾರವಾಡ: ಧಾರವಾಡ ಪಟ್ಟಣದ ದೃಷ್ಟಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳು ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಉಪಾಧ್ಯಾಯರಾದ ರೇವಯ್ಯ ಹಿರೇಮಠ ಅವರು ಮಾತನಾಡಿ ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುವುದು ಎಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನ ಸೇರಿಸಿ ಎಲ್ಲ ಅತಿ ಸಂತೋಷದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಶುಭಾಶಯಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರ ಹಿರೇಮಠ್ ಸಿಬ್ಬಂದಿಗಳಾದ ಸಾವಿತ್ರಿ ಬಿಡಕೆರ ಸೌಮ್ಯ ಅನುರಾಧ ಬಂಗಿ ಹನುಮಂತ ಹಾಗೂ ಸರ್ವ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಾದ ಅಭಿಷೇಕ್ ಬಾರ್ಕೆರ್ ಬಸುರಾಜ್ ಹಿರೇಮಠ್ ಅಸ್ಲಾಂ ಬುಡ್ಡಿಮ್ಮನವರ ಮೈಲಾರ ಲಗಮಣ್ಣವರ್ ಸಮರ್ಥ ಪತ್ತಾರ ಆಕಾಶ್ ಸೂರಣ್ಣವರ್ ಶಿವಲಿಂಗಪ್ಪ ಕೊಂಡೊಳ್ಳಿ ಹಾಗೂ ಎಲ್ಲ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ನಿತೀಶಗೌಡ ತಡಸ ಪಾಟೀಲ್




