ರಾಮದುರ್ಗ:-ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಮನಿಹಾಳ-ಸುರೇಬಾನ ವಲಯದ ಮನಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಮಾರಂಭವು ನೆರೆವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ವೇದಮೂರ್ತಿ ಶಂಕ್ರಯ್ಯ ಸ್ವಾಮಿಗಳು ವಹಿಸಿದ್ದರು.ಅಧ್ಯಕ್ಷತೆ ಮನಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಣಮವ್ವ ಪಿಡ್ಡನ್ನವರ ವಹಿಸದ್ದರು, ಉದ್ಘಾಟಕರಾಗಿ ಆರ್ ಟಿ ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮದುರ್ಗ ಇವರು ಆಗಮಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೆ ಎಂ ಹುಲ್ಲೂರ,ಎಚ್ ಬಿ ಪಾಟೀಲ, ಪ್ರಕಾಶಗೌಡ ಪಾಟೀಲ, ಎಂ ಎಫ್ ಮುನವಳ್ಳಿ, , ಎಸ್ ವಿ ಪಾಟೀಲ, ಎ ಆರ್ ಜೋಶಿ, ಆರ್ ಎಸ್ ಸಂಕನ್ನವರ,ಕೆ ಎನ್ ಯಡ್ರಾವಿ ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಜಿ ಎಂ ಹುಲ್ಲೂರ ಅವರು ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರು ಯಾವಾಗಲೂ ಪೂಜ್ಯನೀಯರು ಎಂದರು ನಿವೃತ್ತ ಶಿಕ್ಷಕರನ್ನು ವಲಯದಲ್ಲಿ ಸನ್ಮಾನಿಸುವುದು ಹೆಮ್ಮೆಯ ವಿಷಯ ಹಾಗೂ ಸುವ್ಯವಸ್ಥಿತವಾಗಿ ಕೆಲಸ ನಿರ್ವಹಿಸಿದ ಸಿ ಆರ್ ಪಿ ಯವರಿಗೆ ಅಭಿನಂದನೆಗಳು ಹಾಗೂ ಸುರೇಬಾನ-ಮನಿಹಾಳ ಭಾಗದಲ್ಲಿ ಒಳ್ಳೆಯ ಶಿಕ್ಷಣ ಮಕ್ಕಳಿಗೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆರ್ ಡಿ ಹಿಂದಿನಮನಿ, ಎ ಎ ಮುರ್ತೋಜಿ, ಎಸ್ ಎಸ್ ರೋಣದ, ಪಿ ಎಂ ಬಾಡಗಾರ, ಪಿ ಎಂ ಹಂಚಾಟೆ, ಸಿ ಟಿ ಪಾಟೀಲ, ಸಿ ಕೆ ಗಡ್ಡೆನ್ನವರ, ಎಸ್ ಎಸ್ ಕಪಲಿ ಗುರುಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ ಪ್ರಾರ್ಥನೆ ಕೆ ಬಿ ಎಸ್ ಮನಿಹಾಳ ಶಾಲೆಯ ಗುರುಮಾತೆಯರು ನಡಿಸಿಕೊಟ್ಟರು, ಸ್ವಾಗತ ಗೀತೆ ಸಿ ಎಂ ಕುಲಕರ್ಣಿ ಗುರುಮಾತೆ ಹಾಗೂ ಗುರುಮಾತೆಯರು, ಸ್ವಾಗತ ಭಾಷಣ ಹಾಗೂ ಮಾಲಾರ್ಪಣೆ ವಿ ಡಿ ಯಲಿಗೋಡ, ಪ್ರಾಸ್ತಾವಿಕ ನುಡಿ ಆರ್ ಪಿ ಬೆಟಗೇರಿ, ಕಾರ್ಯಕ್ರಮ ನಿರೂಪಣೆ ದೀಪಾ ಕಿಂಡ್ರಿ, ಎಸ್ ಎಸ್ ರಂಕಲಕೊಪ್ಪ ವಂದಿಸಿದರು.
ವರದಿ: ಕುಮಾರ ಎಮ್