ಕಾಳಗಿ : ಗಂಜಗೀರಾ ಗ್ರಾಮದಲ್ಲಿ ಸೋಮವಾರ, ಯುನಿಟಿ ಆಫ್ ಮೂಲ ನಿವಾಸಿ ಬಹುಜನ ಸಮಾಜ ಹಾಗೂ ಶಾಲಾ ಸುಧಾರಣಾ ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಮೊದಲಿಗೆ ಸರ್ವಪಲ್ಲಿ ರಾಧಾಕೃಷ್ಣ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಇದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು, ನೀರಾವರಿ ಇಲಾಖೆಯ ಜೆ ಇ ಯಾಗಿ ಕಾರ್ಯನಿರ್ವಹಿಸುತ್ತಿರುವ ಸುನಿಲ್ ಗಂಜಗೀರ ಅವರಿಗೂ ಹಾಗೂ ಎಲ್ಲಾ ಶಿಕ್ಷಕ ವೃಂದಕ್ಕೂ ಸನ್ಮಾನ ಮಾಡಲಾಯಿತು.

ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಲಕ್ಷ್ಮಿಯ ಅವರು ಮತ್ತು ಮಾರುತಿ ಗಂಜಗಿರಿ ಮಾತನಾಡಿದರು,ಈ ಸಂದರ್ಭದಲ್ಲಿ ಸುಭಾಷ್ ಶೀಲವಂತ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜ್ ಕಾಳಗಿ, ರೇವಣಸಿದ್ದಪ್ಪ ಸುಬೇದಾರ್ ಅಧ್ಯಕ್ಷರು ನಿವೃತ್ತ ಯೋಧರ ಸಂಘ, ಪಲ್ಲವಿ ಎಂ ಮುಖ್ಯ ಗುರುಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಜಗಿರಿ, ಅಶೋಕ ಹೂವಿನಬಾವಿ ಇಸಿಓ ಚಿಂಚೋಳಿ,ಶಂಕರನಾಗ ಸಿಎಫ್ಸಿ ಅಕ್ಷರ ಫೌಂಡೇಶನ್ ಪ್ರದೀಪ್ ರೆಡ್ಡಿ ಡಿ ಎಫ್ ಸಿ, ಅನೀಲ್ ಗಂಜಗಿರಿ, ಜೈಭೀಮ್ ಹೊಳ್ಕರ್, ಶ್ರೀಕಾಂತ್ ತಳವಾರ್, ಮತ್ತು ಊರಿನ ಹಿರಿಯರು ಯುವಕರು ಮಹಿಳೆಯರು ಉಪಸ್ಥಿತರಿದ್ದರು.

ವರದಿ : ಹಣಮಂತ ಕುಡಹಳ್ಳಿ




