ಸೇಡಂ : ತಾಲೂಕಿನ ಬಟಗೇರಾ(ಬಿ) ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಮಕ್ಕಳೆಲ್ಲ ಸೇರಿ ಶಿಕ್ಷಕರಿಗೆ ವಿವಿಧ ರೀತಿಯ ನೆನಪಿನ ಕಾಣಿಕೆ ನೀಡಿ ನಾವುಗಳು ಸಮಾಜಕ್ಕೆ ಮಾದರಿ ವ್ಯಕ್ತಗಳಾಗುತ್ತೇವೆ ನೀವು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇವೆ ನಾವು ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೇವೆಂದು ತಮ್ಮ ಗುರುಗಳಿಗೆ ಮಾತು ನೀಡಿದರು.
ತದನಂತರ ಶಾಲೆಯ ಶಿಕ್ಷಕರು ಮತ್ತು ಊರಿನ ಮುಖಂಡರು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ರಾಜೇಶ್ವರಿ, ಗ್ರಾಮದ ಮುಖಂಡರಾದ ವರದಾ ಸ್ವಾಮಿ ಬಿ ಹಿರೇಮಠ, ಮೌನೇಶ್ ವಿಶ್ವಕರ್ಮ ಊಡಗಿ, ಶಾಲೆಯ ಸಹ ಶಿಕ್ಷಕರಾದ ಶಿವಪ್ರಸಾದ್ ವಿಶ್ವಕರ್ಮ ಹಾಗೂ ಸಹ ಶಿಕ್ಷಕರು ಸ್ಥಳೀಯರು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಶೋಭೆತಂದುಕೊಟ್ಟರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




