Ad imageAd image

ಕ್ರಾಂತಿ ನೆಲ ಕಿತ್ತೂರಿನಲ್ಲಿ ಅದ್ದೂರಿಯಾಗಿ ಜರುಗಿದ ಶಿಕ್ಷಕರ ದಿನಾಚರಣೆ.

Bharath Vaibhav
ಕ್ರಾಂತಿ ನೆಲ ಕಿತ್ತೂರಿನಲ್ಲಿ ಅದ್ದೂರಿಯಾಗಿ ಜರುಗಿದ ಶಿಕ್ಷಕರ ದಿನಾಚರಣೆ.
WhatsApp Group Join Now
Telegram Group Join Now

ಕಿತ್ತೂರು:- ಕ್ರಾಂತಿ ನೆಲ ಕಿತ್ತೂರಿನಲ್ಲಿ 2024 ನೇ ಸಾಲಿನ ಶಿಕ್ಷಕರ ದಿನಾಚರಣೆಯು ಗುರುಭವನದಲ್ಲಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಲ್ಮಠ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗಿನ್ದ್ರ ಸ್ವಾಮೀಜಿಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ವಹಿಸಿದರೇ, ನೇತೃತ್ವವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಡಾ.ಅರ್ಚನಾ, ವಿಶ್ರಾಂತ ಆಯುಕ್ತ ವೆಂಕಟೇಶ್, ಕಿತ್ತೂರು ತಾಲ್ಲೂಕು ತಹಶೀಲ್ದಾರ್ ರವೀಂದ್ರ ಹಾದಿಮನಿ, ಸಿ.ಪಿ.ಐ ಶಿವಾನಂದ ಗುಡಗನಟ್ಟಿ, ಇ. ಓ ಕಿರಣ್ ಘೋರ್ಪಡೆ, ವಿವಿಧ ಶಿಕ್ಷಕ ಸಂಘಟನಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು, 2024 ನೇ ಸಾಲಿನ ತಾಲ್ಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರ್ಕಾರಿ ಪ್ರೌಢ ಶಾಲೆಯ ಆನಂದ ಬಂಕಾಪುರ ಸೇರಿದಂತೆ ಎಲ್ಲರಿಗೂ ಸಹ ಸನ್ಮಾನ ಮಾಡಲಾಯಿತು, ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಯನ್ನು ಉದ್ಘಾಟನೆ ಮಾಡಲಾಯಿತು.

ಈ ಕಾರ್ಯಕ್ರಮದ ಬಗ್ಗೆ ನಮ್ಮ ನ್ಯೂಸ್ ಸಮೂಹದೊಂದಿಗೆ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ, ಹಿರಿಯ ಶಿಕ್ಷಕರಾದ ಡಾ.ಶೇಖರ್ ಹಲಸಗಿ, ಎಸ್.ಎಸ್ ಹುಲಮನಿ ಮಾತನಾಡಿದರು, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಬಿ.ಇ. ಓ ಕಚೇರಿಗೆ ಅನುಕೂಲವಾಗುವಂತೆ 50 ಸಾವಿರ ಮೌಲ್ಯದ ಟ್ಯಾಬ್ ಅನ್ನು ವಿತರಣೆ ಮಾಡಿದರು. ಒಟ್ಟಾರೆ ಕ್ರಾಂತಿ ನೆಲ ಕಿತ್ತೂರಿನಲ್ಲಿ ಶಿಕ್ಷಕರ ದಿನಾಚರಣೆಯು ಅದ್ದೂರಿಯಾಗಿ ನೆರವೇರಿತು.

ವರದಿ:-  ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!