Ad imageAd image

ಶಿಕ್ಷಕರು ಜ್ಞಾನದ ದೀಪ, ಸಮಾಜದ ದಾರಿದೀಪ ಈಶ್ವರ ಖಂಡ್ರೆ

Bharath Vaibhav
ಶಿಕ್ಷಕರು ಜ್ಞಾನದ ದೀಪ, ಸಮಾಜದ ದಾರಿದೀಪ ಈಶ್ವರ ಖಂಡ್ರೆ
WhatsApp Group Join Now
Telegram Group Join Now

ಭಾಲ್ಕಿಯಲ್ಲಿ ಅತ್ಯುತ್ತಮವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ – ಶಿಕ್ಷಕರಿಗೆ ಸನ್ಮಾನ, ಸತ್ತಪ್ರಜೆಗಳ ನಿರ್ಮಾಣಕ್ಕೆ ಬದ್ಧತೆ

ಭಾಲ್ಕಿ: ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಪ್ರಥಮ ಪಾಠ. ರಾಷ್ಟ್ರ ಹಾಗೂ ನಾಡಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿಗಳನ್ನು ಸಮಾಜದ ಅಭಿವೃದ್ಧಿಗೆ ಅಣಿಗೊಳಿಸುವ ಜವಾಬ್ದಾರಿ ಅವರ ಮೇಲಿದೆ. ಗುರುಗಳು, ವಿದ್ಯಾರ್ಥಿಗಳಿಗೆ,ಸಮಾಜಕ್ಕೆ ದಾರಿದೀಪ ಆಗಬೇಕು.

ಭಾಲ್ಕಿ ನಗರದ ಪ್ರಯಾಗ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಬೀದರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅತ್ಯಂತ ವೈಭವದಿಂದ ಸಡಗರ ಸಂಭ್ರಮದಿಂದ ಕಾರ್ಯಕ್ರಮ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಬೀದರ ಜಿಲ್ಲಾ ಉಸ್ತುವಾರಿ ಮಂತ್ರಿ ಮಾನ್ಯ ಈಶ್ವರ ಬಿ. ಖಂಡ್ರೆ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇಂದು ಸಮಾಜದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ. ಈ ಸಂದರ್ಭದಲ್ಲಿ ಶಿಕ್ಷಕರು ಶುದ್ಧ ಮನಸ್ಸಿನಿಂದ,ನಿಷ್ಕಲ್ಮಶ ಹೃದಯದಿಂದ ಮಕ್ಕಳಿಗೆ ದಾರಿ ತೋರಿಸಬೇಕು.ಯುವಶಕ್ತಿಯನ್ನು ಜಾಗೃತ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ.ಮಕ್ಕಳು ಗುರು ಮತ್ತು ತಂದೆ-ತಾಯಿಯ ಅನುಕರಣೆ ಮಾಡುತ್ತಾರೆ,ಆದ್ದರಿಂದ ಶಿಕ್ಷಕರ ನಡೆ-ನುಡಿಗಳು ಸಮಾಜಕ್ಕೆ ದಾರಿದೀಪವಾಗಬೇಕು” ಎಂದು ಹಿತವಚನ ನೀಡಿದರು.

ಡಾ. ರಾಧಾಕೃಷ್ಣನ್ ಅವರ ಜೀವನವೇ ನಮಗೆ ಆದರ್ಶ. ಅವರು ತತ್ವಜ್ಞಾನಿ,ಶಿಕ್ಷಣ ತಜ್ಞ,ದಾರ್ಶನಿಕರಾಗಿ,ರಾಷ್ಟ್ರಪತಿ, ದೇಶದ ಉಪರಾಷ್ಟ್ರಪತಿ,ರಾಷ್ಟ್ರಪತಿಯಾಗಿ,ವಿವಿಧ ವಿಶ್ವವಿದ್ಯಾಲಯಗಳ ಕುಲಪತಿ ಆಗಿ ಸೇವೆ ಸಲ್ಲಿಸಿದ ಡಾ. ಎಸ್. ರಾಧಾಕೃಷ್ಣನ್ ಅವರ ಜೀವನವೇ ಶಿಕ್ಷಕರಿಗೆ ಶಾಶ್ವತ ಆದರ್ಶವಾಗಿದೆ” ಎಂದು ಸಚಿವರು ಹೇಳಿದರು.

ಶಿಕ್ಷಣಾಭಿವೃದ್ಧಿಗೆ ಬದ್ಧತೆ ಶಿಕ್ಷಣ ಆವಿಷ್ಕಾರ ಯೋಜನೆ ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ಹೆಚ್ಚಿನ ಅನುದಾನ ಒದಗಿಸಿ ಶಾಲಾ ಕಟ್ಟಡ, ತರಗತಿ ಕೋಣೆ, ಶೌಚಾಲಯ ನಿರ್ಮಾಣ, ಸೇರಿದಂತೆ ಮೂಲಸೌಕರ್ಯ ವೃದ್ಧಿ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತಿದೆ.ಎಸ್ ಎಸ್ ಎಲ್ ಸಿ ಮತ್ತು ಪಿಯೂಸಿ ಫಲಿತಾಂಶದಲ್ಲಿ ಬೀದರ ಜಿಲ್ಲೆ ಶೇಕಡಾ 90 ಸಾಧಿಸುವ ಸಾಮರ್ಥ್ಯ ಹೊಂದಿದೆ.ಶಿಕ್ಷಕರು ಶ್ರಮಿಸಿದರೆ ಈ ಗುರಿ ಸಾಧಿಸಬಹುದು ಮತ್ತು ಮುಂದಿನ ವರ್ಷ ಶಿಕ್ಷಕರ ದಿನಾಚರಣೆಯ ಒಳಗಾಗಿ ಒಂದು ಉತ್ತಮವಾದ ಮಾದರಿ ಸುಸಜ್ಜಿತ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಹಳೆಯ ಪಿಂಚಣಿ ಜಾರಿಗೆ ಭರವಸೆ: ಕೊಟ್ಟ ಮಾತಿನಂತೆ,ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಹೊಸ ಪಿಂಚಣಿ ರದ್ದುಪಡಿಸಿ ಮತ್ತೆ ಹಳೆಯ ಪಿಂಚಣಿ ಮರು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ.ನಾನು ಈ ವಿಷಯ ಕುರಿತು ಸದನದಲ್ಲೂ ಧ್ವನಿ ಎತ್ತುತೇನೆ ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ ತರುತ್ತೇನೆ. ಬೇಗನೆ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ಬರುತ್ತದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಯ ಸಂಕಲ್ಪ ಈಗಾಗಲೇ ಜಿಲ್ಲೆಯಲ್ಲಿ 30 ಲಕ್ಷ ಸಸಿ ನೆಟ್ಟಿರುತ್ತೇವೆ. ಮುಂದಿನ ಎರಡು ವರ್ಷಗಳಲ್ಲಿ 40 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದೇವೆ. ಪರಿಸರ ಸಂರಕ್ಷಣೆಗೂ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರಿಗೆ ಗೌರವ, ಅಕಾಲಿಕ ಮರಣ ಹೊಂದಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಕೃತಜ್ಞತೆ, ಹಾಗೂಶೇಕಡಾ 100% ಫಲಿತಾಂಶ ತಂದುಕೊಟ್ಟ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

ಉಪನಿರ್ದೇಶಕರು ಎಚ್ ಜಿ ಸುರೇಶ ಪ್ರಸ್ತಾವಿಕವಾಗಿ ಮಾತನಾಡಿ ಮುಂದೆ ಗುರಿ ಹಿಂದೆ ಗುರು ಇರಬೇಕು” ಎಂದು ಸರ್ವಪಲ್ಲಿ ರಾಧಾಕೃಷ್ಣ ಅವರ ತತ್ತ್ವ, ಶಿಕ್ಷಣ ತಜ್ಞರ ಕಾರ್ಯಚಟುವಟಿಕೆಗಳನ್ನು ನೆನಪಿಸಿದರು.

ಸೂರ್ಯಕಾಂತ ಸುಂಟೆ, ದತ್ತಾತ್ರಿ ಕಾಟಕರ ಸೇರಿದಂತೆ ಅನೇಕರು ಮಾತನಾಡಿ –
“ಗುರು ಹಿರಿಯರಿಗೆ ಗೌರವಿಸುವುದು ಸಮಾಜದ ಕರ್ತವ್ಯ. ಶಿಕ್ಷಕರೇ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವವರು.” ಎಂದು ಅಭಿಪ್ರಾಯಪಟ್ಟರು.

ಮಹಾಲಿಂಗ ದೇವರು ಆಶೀರ್ವಚನ ನೀಡುತ್ತಾ ಗುರುಗಳಿಲ್ಲದೆ ಸಮಾಜದಲ್ಲಿ ಜ್ಞಾನವಿಲ್ಲ, ಜ್ಞಾನವಿಲ್ಲದೆ ಅಭಿವೃದ್ಧಿ ಅಸಾಧ್ಯ ಎಂದು ಗುರುಗಳ ತ್ಯಾಗ ಸೇವೆಯ ಮಹತ್ವವನ್ನು ಮನದಟ್ಟುಗೊಳಿಸಿದರು.

ಅದೇ ಸಂದರ್ಭದಲ್ಲಿ ಪೂಜ್ಯ ವರಜ್ಯೋತಿ ಭಂತೆ ಬುದ್ಧವಿಹಾರ, ಆಣದೂರ ಹಾಗೂ ಪ್ರೇರಣಾತಾಯಿ ಭೋಸೆ ತೋರಣೆಕರ್ ತಮ್ಮ ಪ್ರೇರಣಾದಾಯಕ ಉಪನ್ಯಾಸಗಳಿಂದ ಸಭಿಕರನ್ನು ಪ್ರಭಾವಿತರಿಸಿದರು.

ಇದೆ ಸಂದರ್ಭದಲ್ಲಿ ಅಮೃತಪ್ಪಾ ಚಿಮಕೊಡೆ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರು,ಹಣಮಂತರಾವ ಚೌಹಾಣ,ಶಶಿಕಲಾ ಪುರಸಭೆ ಅಧ್ಯಕ್ಷರು, ರಾಜಭವನ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ಬದೋಲೆ,so. ಸೋಮಶೇಖರ ಬಿರಾದರ,ರವೀಂದ್ರ ರಡ್ಡಿ ಮಾಲಿಪಾಟೀಲ, ಮಹಬೂಬ ಪಟೇಲ,ಶಿವರಾಜ ಕಪಲಾಪುರೆ, ಚಂದ್ರಶೇಖರ ಬನ್ನಳೆ,ಮನೋಹರ ಹೊಳಕರ, ಶಿವಕುಮಾರ ಫುಲಾರೆ, ರೋಹಿದಾಸ ರಾಠೋಡ, ಮಲ್ಲಿನಾಥ ಸಜ್ಜನ,ಉತ್ತಮ ಸಿಂಧೆ, ಭೀಮಣ್ಣ ಕೊಂಕಣಿ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು,ಹಲವು ಅಧಿಕಾರಿಗಳು,ಬಿಇಓ, ಬಿ. ಆರ್. ಸಿ ಕಚೇರಿಯ ಸಿಬ್ಬಂದಿಗಳು,ಜಿಲ್ಲೆಯ ಸಾವಿರಾರು ಶಿಕ್ಷಕರು ಭಾಗವಹಿಸಿದರು, ಗ್ಲೋರಿ ಮೆಲೋಡಿ ವತಿಯಿಂದ ಸಂಗೀತ ಕಾರ್ಯಕ್ರಮಕ್ಕೆ ಮೆರಗು ನೀಡಿದರು.ಲಖಣಗಾಂವ ಶಾಲೆಯ ಮಕ್ಕಳು ಪ್ರಾರ್ಥನೆ, ನಾಡಗೀತೆ, ಸಂವಿಧಾನದ ಪ್ರಸ್ತಾವನೆಹೇಳಿಕೊಟ್ಟರು,ಚನ್ನಬಸಪ್ಪ ಹಳ್ಳದ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಸ್ವಾಗತಿಸಿದರು, ಗುರುಪ್ರಸಾದ ಪ್ರಾಚಾರ್ಯರು ಡಯಟ್ ವಂದಿಸಿದರು, ದೀಪಕ ಠಮಕೆ ನಿರೂಪಿಸಿದರು.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!