Ad imageAd image

ಶಿಕ್ಷಕರು ಜ್ಞಾನದ ದೀಪ, ಸಮಾಜದ ದಾರಿದೀಪ ಈಶ್ವರ ಖಂಡ್ರೆ

Bharath Vaibhav
ಶಿಕ್ಷಕರು ಜ್ಞಾನದ ದೀಪ, ಸಮಾಜದ ದಾರಿದೀಪ ಈಶ್ವರ ಖಂಡ್ರೆ
WhatsApp Group Join Now
Telegram Group Join Now

ಭಾಲ್ಕಿಯಲ್ಲಿ ಅತ್ಯುತ್ತಮವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ – ಶಿಕ್ಷಕರಿಗೆ ಸನ್ಮಾನ, ಸತ್ತಪ್ರಜೆಗಳ ನಿರ್ಮಾಣಕ್ಕೆ ಬದ್ಧತೆ

ಭಾಲ್ಕಿ:ಮಾತನಾಡಿಅವರು ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಪ್ರಥಮ ಪಾಠ.ರಾಷ್ಟ್ರ ಹಾಗೂ ನಾಡಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿಗಳನ್ನು ಸಮಾಜದ ಅಭಿವೃದ್ಧಿಗೆ ಅಣಿಗೊಳಿಸುವ ಜವಾಬ್ದಾರಿ ಅವರ ಮೇಲಿದೆ. ಗುರುಗಳು, ವಿದ್ಯಾರ್ಥಿಗಳಿಗೆ,ಸಮಾಜಕ್ಕೆ ದಾರಿದೀಪ ಆಗಬೇಕು.

ಭಾಲ್ಕಿ ನಗರದ ಪ್ರಯಾಗ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಬೀದರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅತ್ಯಂತ ವೈಭವದಿಂದ ಸಡಗರ ಸಂಭ್ರಮದಿಂದ ಕಾರ್ಯಕ್ರಮ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಬೀದರ ಜಿಲ್ಲಾ ಉಸ್ತುವಾರಿ ಮಂತ್ರಿ ಮಾನ್ಯ ಈಶ್ವರ ಬಿ. ಖಂಡ್ರೆ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇಂದು ಸಮಾಜದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ. ಈ ಸಂದರ್ಭದಲ್ಲಿ ಶಿಕ್ಷಕರು ಶುದ್ಧ ಮನಸ್ಸಿನಿಂದ,ನಿಷ್ಕಲ್ಮಶ ಹೃದಯದಿಂದ ಮಕ್ಕಳಿಗೆ ದಾರಿ ತೋರಿಸಬೇಕು.ಯುವಶಕ್ತಿಯನ್ನು ಜಾಗೃತ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ.ಮಕ್ಕಳು ಗುರು ಮತ್ತು ತಂದೆ-ತಾಯಿಯ ಅನುಕರಣೆ ಮಾಡುತ್ತಾರೆ,ಆದ್ದರಿಂದ ಶಿಕ್ಷಕರ ನಡೆ-ನುಡಿಗಳು ಸಮಾಜಕ್ಕೆ ದಾರಿದೀಪವಾಗಬೇಕು” ಎಂದು ಹಿತವಚನ ನೀಡಿದರು.
ಡಾ. ರಾಧಾಕೃಷ್ಣನ್ ಅವರ ಜೀವನವೇ ನಮಗೆ ಆದರ್ಶ. ಅವರು ತತ್ವಜ್ಞಾನಿ,ಶಿಕ್ಷಣ ತಜ್ಞ,ದಾರ್ಶನಿಕರಾಗಿ,ರಾಷ್ಟ್ರಪತಿ, ದೇಶದ ಉಪರಾಷ್ಟ್ರಪತಿ,ರಾಷ್ಟ್ರಪತಿಯಾಗಿ,ವಿವಿಧ ವಿಶ್ವವಿದ್ಯಾಲಯಗಳ ಕುಲಪತಿ ಆಗಿ ಸೇವೆ ಸಲ್ಲಿಸಿದ ಡಾ. ಎಸ್. ರಾಧಾಕೃಷ್ಣನ್ ಅವರ ಜೀವನವೇ ಶಿಕ್ಷಕರಿಗೆ ಶಾಶ್ವತ ಆದರ್ಶವಾಗಿದೆ” ಎಂದು ಸಚಿವರು ಹೇಳಿದರು.

ವರದಿ:ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!