ಕಲಘಟಗಿ: ಖಾಸಗಿ ಶಾಲೆ ಶಿಕ್ಷಣಕ್ಕೆ ಹಾಗೂ ನಮ್ಮ ಸರ್ಕಾರಿ ಶಾಲೆಯ ಶಿಕ್ಷಣ ಹೊಂದಾಣಿಕೆ ಮಾಡಿದಾಗ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣದ ಗುಣಮಟ್ಟ ನೋಡಿದಾಗ ಎಲ್ಲೋ ಒಂದು ಕಡೆ ಮುಜುಗರ ಪಡಬೇಕಾದ ಪರಿಸ್ಥಿತಿ ಬಂದೋದಗಿದೆ ಎಂದು ಶಿಕ್ಷಕರಿಗೆ ಸಂತೋಷ ಲಾಡ್ ಕಿವಿ ಮಾತು ಹೇಳಿದರು.
ಪಟ್ಟಣದ ಹೊರವಲಯದ ಗುಡ್ ನ್ಯೂಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನವರ 136ನೇ ಜನ್ಮದಿನೋತ್ಸವ ಅಂಗವಾಗಿ ತಾಲ್ಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಶಿಕ್ಷಕರು ರಾಜಕೀಯ ಕ್ಷೇತ್ರದಿಂದ ದೂರ ಇದ್ದು ಮಕ್ಕಳ ಭವಿಷ್ಯ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ ನೀವು ಯಾವ ಪಕ್ಷದ ಪರವಾಗಿ ಇದ್ದರು ಆಗುವದು ಆಗೇ ಆಗುತ್ತದೆ ಶಿಕ್ಷಕರಿಗೆ ಎಂದು ಸಲಹೆ ಮಾಡಿದರು.
ಮಕ್ಕಳು ಶಾಲೆಯ ದೇಗುಲಕ್ಕೆ ಬಂದಾಗ ಶಿಕ್ಷಕರಾದವರು ಸಮಯ ವ್ಯರ್ಥ ಮಾಡದೇ ಅವರ ಭವಿಷ್ಯದ ಕುರಿತು ಚಿಂತಿಸಿ,ಹೆಚ್ಚಿನ ಕಾಳಜಿ ವಹಿಸಿ, ಮಕ್ಕಳ ಬಗ್ಗೆ ನಾವು ಏನು ಮಾಡಬೇಕು ಎಂಬುದು ನಿರ್ಧಾರ ಮಾಡಿ ಎಂದರು.
ಶಿಕ್ಷಕರಾದವರು ಯಾವ ರಾಜಕೀಯ ಪಕ್ಷಗಳ ಹಾಗೂ ನಾಯಕರ ಜೊತೆ ಬೇರೆಯದೇ ದೇಶದ ಸಂವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಿ ಮತ್ತು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಎಂದರು. ದೇಶದ ಪರಿಸ್ಥಿತಿ ಇಂದು ಏನಾಗಿದೆ ಅಂದರೆ ನಾವುಗಳು ಯಾರ ಕುರಿತು ಮಾತನಾಡಬೇಕು,ಯಾರನ್ನು ಪೂಜಿಸಬೇಕು,ಆರಾಧನೆ ಮಾಡಬೇಕು, ಯಾರ ತತ್ವ ಆದರ್ಶ ಪಾಲಿಸಬೇಕು ಎಂಬುದೇ ತಿಳಿಯುತ್ತಿಲ್ಲ ಆ ವ್ಯವಸ್ಥೆಗೆ ನಾವು ಬಂದು ನಿಂತಿದ್ದೇವೆ ಎಂದರು.
ಮಕ್ಕಳಿಗೆ ಶಿಕ್ಷಕರು ಯಾವ ರೀತಿ ಛಾಪು ಮೂಡಿಸುತ್ತಿರಿ, ನೀತಿ ಪಾಠ ಮಾಡುತ್ತೀರಿ ಅವು ಯುವ ಪೀಳಿಗೆಯ ಭವಿಷ್ಯಕ್ಕೆ ಪರಿಣಾಮ ಬಿರುತ್ತವೆ ನೀವೆಲ್ಲರೂ ಮಕ್ಕಳ ಜೀವನಕ್ಕೆ ದಾರಿದೀಪ ವಾಗಿದ್ದು ನೀವು ಬಿತ್ತಿದ ಶಿಕ್ಷಣ ಅವರ ಭವಿಷ್ಯ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.
ವಿವಿಧ ಶಾಲೆ ಮಕ್ಕಳಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಜರುಗಿದವು.
ಅತ್ಯುತ್ತಮ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಚೇತನಾ ಅಮ್ಮಿನಬಾವಿ ಹಾಗೂ ತಾಲ್ಲೂಕ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕರಾದ ಎನ್. ಪಿ ರಾಯಬಾಗಿ, ಶೈಲಜಾ ನಾಯಕ, ಸಹದೇವ ಟೋನಿ, ಮಹಾತೇಶ ನೇಮತಿ, ಮೃತ್ಯುಂಜಯ ಕುಂದಗೋಳ, ಕಲ್ಯಾಣ ನಿಧಿ ಪ್ರಶಸ್ತಿ ಪಡೆದ ನಾಗಪ್ಪ ಮನ್ನಿಕೇರಿ, ರವಿ ಕುಲಕರ್ಣಿ, ಶ್ರೀದೇವಿ ಬಣಗಾರ, ಶಮಶುದ್ದೀನ ಮುಲ್ಲಾ, ಜಿ. ಆಯ್ ಪಟ್ಟೇದ, ಅಕ್ಕಪ್ಪ ಕುರಣಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಊಟ, ಉಪಹಾರ ಹಾಗೂ ಶಿಕ್ಷಕರಿಗೆ ಸನ್ಮಾನ ಸಚಿವ ಸಂತೋಷ್ ಏರ್ಪಡಿಸಿದ್ದರು.
ತಹಸೀಲ್ದಾರ ವಿರೇಶ ಮುಳಗುಂದ ಮಠ, ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ,ಬಿಇಓ ಉಮಾದೇವಿ ಬಸಾಪುರ, ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಸ್. ಆರ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಸಿಪಿಐ ಶ್ರೀಶೈಲ್ ಕೌಜಲಗಿ,ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಗುಡ್ ನ್ಯೂಸ್ ಕಾಲೇಜಿನ ಆಡಳಿಧಿಕಾರಿ ಕೆ. ಜೆ ವರ್ಗಿಸ್,ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕುಲಕರ್ಣಿ,ಅಧ್ಯಕ್ಷೆ ಶಿಲ್ಪಾ ಪಾಲಕರ , ಉಪ್ಪಾಧ್ಯಕ್ಷ ಗಂಗಾಧರ ಗೌಳಿ,ನರೇಶ ಮಲೆನಾಡು,ತಾಲ್ಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್. ಎಂ ಹೊಲ್ತಿಕೋಟಿ, ಐ. ವಿ ಜವಳಿ ಇದ್ದರು.