ಭಾಲ್ಕಿ: ನಿರಂತರ ಮಳೆಯಿಂದ ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ನೀಡಲು ಆಗ್ರಹಿಸಿ 10 ರಂದು ‘ತಹಸೀಲ್ ಚಲೋ’ ಕ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಯುವ ಮುಖಂಡ ಡಿ.ಕೆ.ಸಿದ್ರಾಮ್ ತಿಳಿಸಿದರು.
ತಾಲೂಕಿನಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಗ್ರಾಮಗಳಾದ ಆನಂದವಾಡಿ, ನಿಡೆಬಾನ, ಸಾಯಗಾಂವ, ಇಂಚೂರ, ಕೋಂಗಳಿ ಹೊಲ-ಗದ್ದೆಗಳಿಗೆ ಮತ್ತು ಬೀಜ್‌ಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ವೀಕ್ಷಿಸಿದರು.
ರೈತರು ದುಬಾರಿ ವೆಚ್ಚದಲ್ಲಿ ಬಿತ್ತಿದ ಸೊಯಾ, ತೊಗರಿ, ಉದ್ದು, ಹೆಸರು, ಕಬ್ಬು, ಸೇರಿದಂತೆ ವಿವಿಧ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿವೆ. ಅಲ್ಲದೆ ವಿವಿಧ ಜಲಾಶಯಗಳಿಂದ ಹರಿ ಬಿಟ್ಟ ನೀರಿನಿಂದ ನದಿ ದಡದಲ್ಲಿರುವ ರೈತರ ಬೆಳೆಗಳು ಸಂಪೂರ್ಣ ನಷ್ಟಕ್ಕೊಳಗಾಗಿವೆ. ಅನೇಕ ಗ್ರಾಮಗಳಲ್ಲಿ ಮಳೆಯಿಂದ ಮನೆಗಳು ಬಿದ್ದು ಹೋಗಿವೆ. ಸರ್ಕಾರ ಕೂಡಲೇ ಪ್ರಕೃತಿ ವಿಕೋಪದಡಿ ಪ್ರತಿ ಎಕರೆಗೆ 30 ಸಾವಿರ ರೂ.ಬೆಳೆ ಪರಿಹಾರ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಮುತುವರ್ಜಿ ವಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪ್ರತಾಪ ಪಾಟೀಲ್, ಶಿವಾಜಿ ದೇಶಮುಖ, ಶರದ ದುರ್ಗಾಳೆ, ಜೈರಾಜ ಕೊಳ್ಳಾ, ಕೈಲಾಸ ಪಾಟೀಲ್, ಶಿವರಾಜ ಭೂರೆ, ಕಲ್ಲಪ್ಪ ಭೂರೆ, ಮಾರುತಿ ಭೂರೆ, ಶಿವಾಜಿ ಮೇತ್ರೆ, ಸುಭಾಷ ಮಾಶಟ್ಟೆ, ಸಂಗಮೇಶ ಟೆಂಕಾಳೆ, ಜಗದೀಶ ಬಿರಾದಾರ, ಕನಕ ಮಲ್ಲೇಶಿ, ಸಂಜೀವ ದುರ್ಗಾಳೆ, ಮಲ್ಲಪ್ಪ ದೇಶಮುಖ, ಸಂಗಮೇಶ ಭೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸಂತೋಷ್ ಬಿಜಿ ಪಾಟೀಲ್




