Ad imageAd image

೬೯ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ.! ತಹಸಿಲ್ದಾರ್ ಅರುಣ್. ಹೆಚ್. ದೇಸಾಯಿ.!

Bharath Vaibhav
೬೯ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ.! ತಹಸಿಲ್ದಾರ್ ಅರುಣ್. ಹೆಚ್. ದೇಸಾಯಿ.!
WhatsApp Group Join Now
Telegram Group Join Now

ಸಿಂಧನೂರು : -ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಗರಸಭೆಯಿಂದ ತಹಸಿಲ್ದಾರ್ ಕಚೇರಿ ವರೆಗೆ ನಾಡಮಾತೆ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ
ಬಂದು ತಹಸೀಲ್ ಕಾರ್ಯಾಲಯದ ಆವರಣದಲ್ಲಿ ೬೯ ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ತಹಸಿಲ್ದಾರ್ ಅರುಣ್. ಹೆಚ್. ದೇಸಾಯಿ ನೆರವೆರಿಸಿದರು.

ಈ ಕಾರ್ಯಕ್ರಮದಲ್ಲಿ ಚಿಣ್ಣರ ಚಿಲಿಪಿಲಿ ನಾಗರಿಕರ ಕಣ್ಮನ ಸೆಳೆಯಿತು ಮತ್ತೊಂದು ಕಡೆ ಬೆಳಕಿನ ಹಬ್ಬ ದೀಪಾವಳಿ ಉತ್ಸಹದ ವಾತಾವರಣ ಕಣ್ಣು ಕುಕ್ಕುವಂತಿತ್ತು ತಹಸಿಲ್ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ
ನಗರದ ವಿವಿಧ ಶಾಲಾ ಮಕ್ಕಳು ಕನ್ನಡ ಗೀತೆಗಳಿಗೆ ನೃತ್ಯ ಮಾಡಿ ಪ್ರತಿಭೆ ಪ್ರದರ್ಶಿಸಿದರು ಮಕ್ಕಳ ನೃತ್ಯಭಿಮಾನಕ್ಕೆ ಶಾಲಾ ಶಿಕ್ಷಕರು, ಮಕ್ಕಳ ಪೋಷಕರು ನಾಗರಿಕರು ಕನ್ನಡಪರ ಸಂಘಟನೆಗಳು ಮಕ್ಕಳನ್ನು ಪ್ರೋತ್ಸಾಹಿಸಿದರು.

ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ‘ನಮ್ಮ ಕರ್ನಾಟಕ ಸೇನೆ, ಹಾಗೂ ‘ಕರ್ನಾಟಕ ರಕ್ಷಣಾ ವೇದಿಕೆ, ಸಂಘಟನೆಗಳ ಕಾರ್ಯಕರ್ತರು ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಭಾಗವಹಿಸಿದ್ದವು ಈ ಒಂದು ಸುಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಷೀನ್ ರಿಗೆ. ಕಾರ್ಪೆಂಟರ್ ಗೆ ಕಿಟ್ಟುಗಳನ್ನು ಕೊಡುವ ಮುಖಾಂತರ ಅವರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ – ಅರುಣ್.ಹೆಚ್. ದೇಸಾಯಿ ತಾಸಿಲ್ದಾರರು, ಹಂಪನಗೌಡ ಬಾದರ್ಲಿ ಶಾಸಕರು , ಬಸನಗೌಡ ಬಾದರ್ಲಿ. ವಿಧಾನ ಪರಿಷತ್ ಸದಸ್ಯರು, ಎಂ.ದೊಡ್ಡ ಬಸವರಾಜ ಅಧ್ಯಕ್ಷರು ಪಿಕಾರ್ಡ್ ಬ್ಯಾಂಕ್, ಮಲ್ಲನಗೌಡ ಬಾದರ್ಲಿ ಅಧ್ಯಕ್ಷರು. ಟಿ. ಎ.ಪಿ.ಸಿ. ಎಂ.ಎಸ್, ಹಂಪಯ್ಯ ಸ್ವಾಮಿ ಸಾಲಿಮಠ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು, ಚಂದ್ರಶೇಖರ ಹಿರೇಮಠ ಅಧ್ಯಕ್ಷರು, ಕ.ರಾ.ಸರ್ಕಾರಿ ನೌಕರ ಸಂಘ. ಹಾಗೂ ಚಂದ್ರಶೇಖರ್ ಕಾರ್ಮಿಕ ಅಧಿಕಾರಿ, ಮಂಜುನಾಥ ಎಂ. ಗುಂಡೂರು. ಪೌರಾಯುಕ್ತರು,ಬಿ.ಎಸ್. ತಳವಾರ್. ಪೊಲೀಸ್ ಉಪಾದಿಕ್ಷಕರು, ಶ್ರೀಮತಿ ವಾಜಿದಾ ಮಜಿದ. ಕ್ಷೇತ್ರ ಶಿಕ್ಷಣಾಧಿಕಾರಿ, ಭೀಮಪ್ಪ ಶಾವಂತಗೇರಾ. ಸಹಾಯಕ ನಿರ್ದೇಶಕರು ಗ್ರೇಡ್- 2 ಸ.ಕ.ಇ ಇನ್ನು ಅನೇಕರು ಭಾಗವಹಿಸಿದ್ದರು,

 ವರದಿ:-   ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!