Ad imageAd image

ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್  ಜಯಂತಿ ಅರ್ಥಪೂರ್ಣವಾಗಿ ಆಚರಣೆಗೆ ತಹಶಿಲ್ದಾರ ರವಿಂದ್ರ ಹಾದಿಮನಿ ಕರೆ

Bharath Vaibhav
ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್  ಜಯಂತಿ ಅರ್ಥಪೂರ್ಣವಾಗಿ ಆಚರಣೆಗೆ ತಹಶಿಲ್ದಾರ ರವಿಂದ್ರ ಹಾದಿಮನಿ ಕರೆ
WhatsApp Group Join Now
Telegram Group Join Now

ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಜಯಂತಿ ಅರ್ಥಪೂರ್ಣವಾಗಿ ಆಚರಣೆಗೆ ತಹಶಿಲ್ದಾರ ರವಿಂದ್ರ ಹಾದಿಮನಿ ಕರೆ

ಕಾಗವಾಡ:ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ತಾಲ್ಲೂಕಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಾರ್ವಜನಿಕರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಹಶಿಲ್ದಾರ ರವಿಂದ್ರ ಹಾದಿಮನಿ ಹೇಳಿದರು.
ಅವರು ದಿನಾಂಕ 1ರಂದು ಕಾಗವಾಡದ ಬಸವ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಏಪ್ರಿಲ್ 5 ಡಾ.ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14 ರಂದು
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯ ಉದ್ದೇಶಿಸಿ ಮಾತನಾಡುತ್ತಾ
ಪ್ರತಿ ವರ್ಷದಂತೆ ಈ ವರ್ಷವೂ ಇಬ್ಬರು ಮಹನೀಯರ ಜಯಂತಿಯನ್ನು ಏಪ್ರಿಲ್ 5 ಮತ್ತು14ರಂದು ಅತ್ಯಂತ ಅದ್ದೂ ರಿಯಾಗಿ ಆಚರಿಸಲಾಗುವುದು. ಮಹಾನ್ ಪುರುಷರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವಂತೆ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡೋಣ’ ಎಂದು ಹೇಳಿದರು.
ಇದೆ ವೇಳೆ ದಲಿತ ಮುಖಂಡರು ಮಾತನಾಡುತ್ತಾ, ಪ್ರತಿ ವರ್ಷದಕ್ಕಿಂತ ಈ ವರ್ಷ ನಾವೆಲ್ಲ ಸೇರಿಕೊಂಡು ಅದ್ದೂರಿ ಆಚರಣೆ ಮಾಡುವವರಿದ್ದು ನಮಗೆ ಮೆರವಣಿಯಲ್ಲಿ ಡಾಲ್ಬಿ ಸೌಂಡ್ ಸಿಸ್ಟಮ್ ಹಚ್ಚಲು ಒಕ್ಕೋರಲ ಅಭಿಪ್ರಾಯವಿದ್ದು ಈ ಸಂಭಂಧ ನಮಗೆ ಯಾವುದೇ ರೀತಿಯ ಅಡ್ಡಿ ಬರಲಾರದೇ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಗ್ರಾಮೀಣ ಮಟ್ಟದಲ್ಲಿಯೂ ಅದ್ದೂರಿ ಆಚರಣೆಗಳಾಗುವದರಿಂದ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕೆಂದು ವಿನಂತಿಸಿದರು.
ವಿದ್ಯಾರ್ಥಿಮುಖಂಡ ವಿವೇಕ ಕುರ್ಪೆ ಮಾತನಾಡಿ, ಅಂಬೇಡ್ಕರ್ ಜಯಂತಿಯಂತಹ ಮಹತ್ವದ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ದಲಿತ ನಾಯಕರು ಮಾತ್ರ ಭಾಗವಹಿಸಿದ್ದೇವೆ.ತಾಲ್ಲೂಕು ಅಧಿಕಾರಿಗಳು ಬಂದಿಲ್ಲ. ಇದು ಅಧಿಕಾರಿಗಳ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಸಭೆಗೆ ಬಾರದ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ದ ಮುಖಂಡರು ಒಕ್ಕೊರಲಿನಿಂದ ಅವರ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿದರು.
ಸಮಾಜ ಕಲ್ಯಾಣಧಿಕಾರಿ ಪರಶುರಾಮ ಪತ್ತಾರ ಮಾತನಾಡಿ ಶಾಸಕ ರಾಜು ಕಾಗೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡುವಂತ ವಿಚಾರಧಾರೆಯುಳ್ಳ ಉಪನ್ಯಾಸಕರನ್ನು ಕರೆಸಲಾಗುವದು.ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಜಯಂತಿಯಲ್ಲಿ ಕಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಗುವುದು. ಮತ್ತು ಎಲ್ಲ ಅಧಿಕಾರಿಗಳಗೆ ಕಾರ್ಯಕ್ರಮದ ಜವಾಬ್ದಾರಿ ನೀಡಲಾಗುವುದು. ಅದರ ಜೊತೆಗೆ ಶಾಲಾ ಮಕ್ಕಳಿಂದ ಪ್ರಬಂಧ,ಭಾಷಣ,ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ  ಹಾಗೂ ಮೆರವಣಿಗೆಯಲ್ಲಿ ಕಡ್ಡಾಯವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಭಾಗವಹಿಸಲು ಸಿಡಿಪಿಒ ರವಿಂದ್ರ ಗುದಗೆನ್ನವರ ಅವರಿಗೆ ಕೇಳಿಕೊಂಡಾಗ ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸುವದಾಗಿ ಹೇಳಿದರು.

ಡಾಲ್ಬಿ ಸಿಸ್ಟಮ್ ಹಚ್ಚಲು ಅನುಮತಿ ನೀಡಲು ಒತ್ತಾಯ:ಡಾ.ಬಿ.ಅಂಬೇಡ್ಕರ್ ಜಯಂತಿಗೆ ಡಾಲ್ಬಿ ಸಿಸ್ಟಮ್ ಹಚ್ಚಲು  ಪೋಲಿಸ್ ಇಲಾಖೆ ಅನುಮತಿ ನೀಡಬೇಕು ಎಂದು ಎಲ್ಲ ದಲಿತ ಮುಖಂಡರು ಒಕ್ಕೋರಲವಾಗಿ ತಹಶಿಲ್ದಾರ ಹಾಗು ಪೋಲಿಸ್ ಇಲಾಖೆಗೆ ಆಗ್ರಹಿಸಿದರು.ಅನುಮತಿ ನೀಡುವ ಬಗ್ಗೆ ಜಿಲ್ಲೆಯಲ್ಲಿ ಮೇಲಿನ ಅಧಿಕಾರಿಗಳು ಅನುಮತಿ ನೀಡುತ್ತಾರೆ ಅದರ ಅನು ಅಸಾರವಾಗಿ ಅನುಮತಿ ನೀಡಲಾಗುವುದು ಎಂದು ಪಿ ಎಸ್ ಆಯ್ ರಾಘವೇಂದ್ರ ಖೋತ ಭರವಸೆ ನೀಡಿದರು.

ಈ ವೇಳೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವಿರಣ್ಣಾ ವಾಲಿ,ಪಪಂ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೇಟ್ಟಿ,ಮಹಾಂತೇಶ ಕವಲಾಪುರೆ, ಗ್ರೇಡ೨ ತಹಶಿಲ್ದಾರ ರಶ್ಮಿ ಜಕಾತಿ, ಆರೋಗ್ಯಧಿಕಾರಿ ಪುಷ್ಪಲತಾ ಸುಣದಕಲ್,ಬಿಸಿಯೋಟ ಯೋಜನಾಧಿಕಾರಿ ಮಲಿಕಾರ್ಜುನ ನಾಮದಾರ, ಲೋಕೋಪಯೋಗಿ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ, ದಲಿತ ಮುಖಂಡರಾದ ಸಂಜಯ ತಳವಲ್ಕರ್,ಪ್ರಕಾಶ ದೊಂಡಾರೆ,ಈಶ್ವರ ಕಾಂಬಳೆ,ರೊಹೀತ ಕಾಂಬಳೆ,ರಾಜು ಕಾಂಬಳೆ,ಬಾಳಾಸಾಬ ಕಾಂಬ್ಳೆ,ವಿವೇಕ ಕರ್ಪೆ,,ಉಮೇಶ ಮನೋಜ ಶಶಿಕಾಂತ ನಡೋಣಿ,ಅಶೋಕ ಕಾಂಬಳೆ,ಅನೀಲ ಚೌಹಾಣ,ದೀಪಕ ಕಾಂಬ್ಳೆ,ವೆಂಕಟೇಶ ಕಾಂಬಳೆ,ಪ್ರಕಾಶ ಕಾಂಬಳೆ,ಉದಯ ಖೋಡೆ, , ಮೀರಾಸಾಬ ಕಾಂಬ್ಳೆ, ಬಾಲಕೃಷ್ಣ ಭಜಂತ್ರಿ,ವಿನೋದ ಹುಲ್ಲಸಾರ,ಸುನೀಲ ಮದಭಾವಿ,ವಿನೋದ ದೇವಣೆ,ಸದಾಶಿವ ಮಾಂಗ,ವಿನೋದ ಕಾಂಬಳೆ, ರಾಜಶೇಖರ ಹಿರೇಮನಿ,ಸೇರಿದಂತೆ ಅನೇಕರು ದಲಿತ ಮುಖಂಡರ ಉಪಸ್ಥಿತರಿದ್ದರು.

ವರದಿ: ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!