Ad imageAd image

ಕಠಿಣ ಐರನ್ ಮ್ಯಾನ್‌ ಸ್ಪರ್ಧೆ ಗೆದ್ದ ತೇಜಸ್ವಿ ಸೂರ್ಯ : ಮೋದಿ ಶ್ಲಾಘನೆ

Bharath Vaibhav
ಕಠಿಣ ಐರನ್ ಮ್ಯಾನ್‌ ಸ್ಪರ್ಧೆ ಗೆದ್ದ ತೇಜಸ್ವಿ ಸೂರ್ಯ : ಮೋದಿ ಶ್ಲಾಘನೆ
WhatsApp Group Join Now
Telegram Group Join Now

ಬೆಂಗಳೂರು: ಫಿಟ್‌ನೆಸ್ ಮೂಲಕವೇ ದೇಶದಲ್ಲಿ ಹೆಸರಾಗಿರುವ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ತಮ್ಮ ಫಿಟ್‌ನೆಸ್ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ.

ದೇಶದಲ್ಲಿ ತೀರಾ ಕಠಿಣ ಎನಿಸುವ ಸ್ಪರ್ಧೆಯಲ್ಲಿ ಒಂದೆಸಿರುವ ಐರನ್ ಮ್ಯಾನ್‌ 70.3 ರೇಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸುವ ಮೂಲಕ ಈ ಸ್ಫರ್ಧೆಯಲ್ಲಿ ವಿಜೇತರಾದ ಮೊದಲ ಸಂಸದ ಎನ್ನುವ ದಾಖಲೆ ಬರೆದಿದ್ದಾರೆ.

ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ವಾಕಿಂಗ್, ಸ್ವಿಮ್ಮಿಂಗ್‌ ಹಾಗೂ ಸೈಕ್ಲಿಂಗ್‌ ಮೂರು ರೀತಿಯ ಸ್ಪರ್ಧೆಗಳಿರುತ್ತವೆ, ಈ ಮೂರರಲ್ಲಿಯೂ ತೇಜಸ್ವಿ ಸೂರ್ಯ ಅವರು ಗೆಲುವು ಸಾಧಿಸುವ ಮೂಲಕ ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ವಿಶೇಷ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಗೋವಾದಲ್ಲಿ ಭಾನುವಾರ ನಡೆದ ಈ ಸ್ಫರ್ಧೆಯಲ್ಲಿ ತೇಜಸ್ವಿ ಸೂರ್ಯ ಅವರು 1,900 ಮೀಟರ್ ಈಜು, 90 ಕಿ.ಮೀ ಸೈಕ್ಲಿಂಗ್‌ ಮತ್ತು 21.1 .ಕಿಮೀ ಓಟದ ಮೂರು ವಿಭಾಗಗಳಲ್ಲಿ ಭಾಗಿಯಾಗಿ 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆೆ ಈಜು, ಓಟ ಹಾಗೂ ಸೈಕ್ಲಿಂಗ್‌ ಮೂರರಲ್ಲಿಯೂ ಪರಿಣಿತಿ ಇರಬೇಕು ಹಾಗೂ ದೈಹಿಕವಾಗಿಯೂ ಸಾಕಷ್ಟು ಸದೃಢರಾಗಿರಬೇಕು. ಆದ್ದರಿಂದ ಇದಕ್ಕೆೆ ತಿಂಗಳ ಕಾಲ ಪರಿಶ್ರಮ ಅಗತ್ಯ. ಆದ್ದರಿಂದ ಬಹುತೇಕರು ಈ ಐರನ್‌ಮ್ಯಾಾನ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆೆ ಹಿಂದೇಟು ಹಾಕುತ್ತಾರೆ.

ಆದರೆ ತೇಜಸ್ವಿ ಸೂರ್ಯ ಅವರು ನಾಲ್ಕು ತಿಂಗಳ ಕಠಿಣ ಪರಿಶ್ರಮದ ಮೂಲಕ ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವೃತ್ತಿಪರ ಕ್ರೀಡಾಪಟುಗಳನ್ನು ಮೀರಿ ತೇಜಸ್ವಿ ಸೂರ್ಯ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!