Ad imageAd image

ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ : ತೇಜಸ್ವಿ ಸೂರ್ಯ 

Bharath Vaibhav
ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ : ತೇಜಸ್ವಿ ಸೂರ್ಯ 
WhatsApp Group Join Now
Telegram Group Join Now

ನವದೆಹಲಿ : ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲು ಮುಂದಾಗಿರುವುದು ಅಸಾಂವಿಧಾನಿಕ, ಇದನ್ನು ವಿರೋಧಿಸಿ ಶೀಘ್ರವೇ ಕರ್ನಾಟಕ ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ಸಲ್ಲಿಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದರು.

ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ವಿರೋಧಿಸಿ ಮಾತನಾಡಿದ ಅವರು, ಮೀಸಲಾತಿ ನಿರ್ಧಾರ ವಾಪಸ್​ ಪಡೆಯದಿದ್ದಲ್ಲಿ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡುತ್ತೇವೆ. ಸರ್ಕಾರದ ಈ ಆಟಾಟೋಪಕ್ಕೆ ಕೊನೆಹಾಡುತ್ತೇವೆ. ಯಾವತ್ತೂ ಈ ಧರ್ಮ ಆಧಾರಿತ ಮೀಸಲಾತಿ ಜಾರಿಗೆ ಬಾರದಂತೆ ನಾವು ಹೋರಾಡುತ್ತೇವೆ ಎಂದರು.

ರಾಜ್ಯ ಸರ್ಕಾರ ಬಜೆಟ್​​​ನಲ್ಲಿ ಸರ್ಕಾರಿ ಟೆಂಡರ್​​ಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ತೆಗೆದುಕೊಂಡಿರುವ ಕ್ರಮ ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನಡಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶವಿಲ್ಲ. ಹಲವು ಬಾರಿ ಸುಪ್ರೀಂ ಕೋರ್ಟ್​​, ಅನೇಕ ನ್ಯಾಯಾಲಗಳು ಈ ರೀತಿ ಮೀಸಲಾತಿ ನೀಡಬಾರದು ಎಂದಿವೆ. ಮತಬ್ಯಾಂಕ್​​​ಗೋಸ್ಕರ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್​​​​ ಸರ್ಕಾರ ಸಂವಿಧಾನಬಾಹಿರ ಕೆಲಸ ಮಾಡಿದೆ ಎಂದು ದೂರಿದರು.

ಈ ಹಿಂದೆಯೂ ಮನಮೋಹನ್ ಸಿಂಗ್​ ಅವರು​ ಪ್ರಧಾನಿಯಾಗಿದ್ದಾಗ ದೇಶದ ಸಂಪತ್ತಿನ ಮೇಲೆ ಮುಸಲ್ಮಾನರಿಗೆ ಪ್ರಥಮ ಹಕ್ಕಿರಬೇಕು ಎಂದಿದ್ದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದವರಿದ್ದಾರೋ ಅಷ್ಟು ಶೇಕಡಾವಾರು ಮೀಸಲಾತಿ ನೀಡಬೇಕು ಎಂದು ರಾಹುಲ್​ ಗಾಂಧಿ ಹೇಳಿದ್ದರು. ಇದನ್ನು ಮುಂದುವರಿಸಿಕೊಂಡು ಸಿದ್ದರಾಮಯ್ಯ ಅವರು ಕಾನೂನು ಬಾಹಿರವಾಗಿ ಶೇ.4ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ ಎಂದು ಕಿಡಿಕಾರಿದರು.

ಸಂವಿಧಾನ ರಚನೆ ವೇಳೆ ಧರ್ಮದ ಆಧಾರದಲ್ಲಿ ಮೀಸಲಾತಿ ವಿಷಯ ಚರ್ಚೆಗೆ ಬಂದಾಗ, ಮೊದಲು ಇದನ್ನು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಧರ್ಮದ ಆಧಾರದಲ್ಲಿ ಮೀಸಲಾತಿ ಕಲ್ಪಿಸಿದ್ದಲ್ಲಿ ದೇಶ ವಿಭಜನೆ, ನುಚ್ಚು ನೂರಾಗುತ್ತದೆ. ಇದನ್ನು ನಾವು ವಿರೋಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ತಮ್ಮನ್ನ ತಾವು ಅಂಬೇಡ್ಕರ್ ವಾದಿ, ಸಮಾಜವಾದಿ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯ ಅವರು ಸಂವಿಧಾನ ವಿರೋಧ, ಅಂಬೇಡ್ಕರ್ ಅವರ ನಿಲುವಿಗೆ ವಿರೋಧದ ಕೆಲಸ ಮಾಡಿದ್ದಾರೆ. ಈ ಅಸಾಂವಿಧಾನಿಕ ನಡೆಯ ವಿರುದ್ಧ ನಾವು ವಿಧಾನಸಭೆ, ಸಂಸತ್​ನಲ್ಲೂ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article
error: Content is protected !!