ನವದೆಹಲಿ: ರಾಷ್ಟಿçÃಯ ಜನತಾ ದಳ (ಆರ್.ಜೆಡಿ)ಯ ಹಿರಿಯ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರ ಸುಪುತ್ರ ತೇಜಸ್ವಿ ಯಾದವ್ ಆವರನ್ನು ಆರ್.ಜೆಡಿಯ ರಾಷ್ಟಿçÃಯ ಕರ‍್ಯಕಾರಿಣಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪಕ್ಷದ ಆಂತರಿಕ ಸಮಸ್ಯೆ ಹಾಗೂ ಈಚೆಗೆ ಮುಗಿದ ಬಿಹಾರ ವಿಧಾವಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ನಂತರವೂ ತೇಜಸ್ವಿ ಯಾದವ್ ಅವರನ್ನು ನೇಮಕವನ್ನು ಮಾಡಿದ್ದು ವಿಶೇಷ. ಪಕ್ಷದ ಹಿರಿಯ ಮುಖ್ಯಸ್ಥ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಲಾಲು ಪ್ರಸಾದ ಯಾದವ್ ಅವರ ಉಪಸ್ಥಿತಿಯಲ್ಲಿಯೇ ಈ ಆಯ್ಕೆಯಾಗಿದೆ.
ಪಕ್ಷದ ಕರ‍್ಯಕಾರಿಣಿ ಸಭೆ ನಾಳೆಯಷ್ಟೇ ಪಾಟ್ನಾದಲ್ಲಿ ನಡೆಯಬೇಕಾಗಿದ್ದು, ಈ ಮಹತ್ವದ ಸಭೆ ಮುನ್ನವೇ ತೇಜಸ್ವಿ ಯಾದವ್ ನೇಮಕವಾಗಿರುವುದ ವಿಶೇಷವಾಗಿದೆ. ಏತನ್ಮಧ್ಯೆ ತೇಜಸ್ವಿ ಯಾದವ್ ಅವರ ಈ ನೇಮಕವನ್ನು ಲಾಲು ಪ್ರಸಾದ ಯಾದವ್ ಅವರ ಸುಪುತ್ರಿ ರೋಹಿಣಿ ಆಚರ‍್ಯ ಬಲವಾಗಿ ವರೋಧಿಸಿದ್ದಾರೆ.
ರಾಷ್ಟಿçÃಯ ಜನತಾ ದಳದ ನೂತನ ಆಧ್ಯಕ್ಷರಾಗಿ ತೇಜಸ್ವಿ ಯಾದವ್ ನೇಮಕ




