ತುಮಕೂರು :ಪಾವಗಡ ತಾಲೂಕಿನ, ಪಟ್ಟಣದಲ್ಲಿ ಇರುವ ಟೋಲ್ ಗೇಟ್ ನಲ್ಲಿರುವ.ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ದಿನಾಂಕ, 19/03/25 ಬುಧವಾರ ರಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹತ್ತಿರ ಪಾವಗಡ ತಾಲೂಕಿನ ದಲಿತ ಪರ ಒಕ್ಕೂಟ ಸಂಘಟನೆಗಳ ವತಿಯಿಂದ ಒಳ ಮೀಸಲಾತಿ ಜಾರಿ ಮಾಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಮಾದಿಗ ಸಮುದಾಯದ ನಾಯಕ ಮಂದಕೃಷ್ಣ ಮಾದಿಗ ಅವರಿಗೆ ಹಾಲಿನ ಬಳಿ ಅಭಿಷೇಕ ಮಾಡಿ ಅಭಿನಂದನೆ ಸಲ್ಲಿಸಿದರು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾದಿಗ ಸಮಾಜದ ಹಿರಿಯ ಮುಖಂಡ ಕೋರ್ಟ್ ನರಸಪ್ಪ ಮಾತನಾಡಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ಆರಂಭವಾದ ಮಾದಿಗ ಸಮುದಾಯದ ಕ್ರಾಂತಿಕಾರಿ ಪಾದಯಾತ್ರೆ ಮಾ.21ರ ಶುಕ್ರವಾರದಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್ ತಲುಪಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಭಾಗವಹಿಸಬೇಕೆಂದು ಹೇಳಿದ್ದಾರೆ.
ದಲಿತ ಪರ ಒಕ್ಕೂಟ ಸಂಘಟನೆಗಳು ವತಿಯಿಂದ
ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರದ ಬಳಿ ಇರುವ ದತ್ತಾಂಶಗಳನ್ನು ಪರಿಗಣಿಸಿ, ವಿಳಂಬ ನೀತಿ ಅನುಸರಿಸದೇ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು
ಆಗ್ರಹಿಸಿದರು.
ದಲಿತ ಯುವ ಮುಖಂಡ ಟಿ.ಎನ್.ಪೇಟೆ ರಮೇಶ್ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದ ಜಾತಿಗಳ ಅಭಿವೃದ್ಧಿಯ ಸದುದ್ದೇಶದಿಂದ ಆಯಾ ಜಾತಿಗಳಿಗೆ ಒಳ ಮೀಸಲಾತಿ ಒದಗಿಸುವ ಸಂವಿಧಾನಿಕ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯವು ಆಯಾ ರಾಜ್ಯಗಳಲ್ಲಿ ಎಂದು ತೀರ್ಪು ನೀಡಿದೆ. ಸಂವಿಧಾನ ಪರಿಚ್ಛೇದ 341ನೇ ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿಗೆ ತರುವ ಇಚ್ಛಾಶಕ್ತಿ ಇಲ್ಲ ಎಂದು ಆಗ್ರಹಿಸಿದರು.ಒಳ ಮೀಸಲಾತಿ ಬೇಡಿಕೆ ರಾಜ್ಯದ ಮಾದಿಗ ಸಮುದಾಯದ ಬಹು ಧೀರ್ಘಕಾಲದ ಬೇಡಿಕೆಯಾಗಿದೆ. ಒಳ ಮೀಸಲಾತಿ ಆಗ್ರಹಿಸಿ ರಾಜ್ಯದಲ್ಲಿ ಮೂರು ದಶಕಗಳಿಂದ ನಿರಂತರ ಹೋರಾಟ ನಡೆದಿದೆ. ಒಳ ಮೀಸಲಾತಿ ಹೋರಾಟದ ಬಗ್ಗೆ ಇಂದಿನ ಸರ್ಕಾರ ಕೇವಲ ಸಹಾನುಭೂತಿ ತೋರಿಸುತ್ತದೆ, ಆದರೆ ಕ್ರಿಯಾರೂಪಕ್ಕೆ ಬರುತ್ತಿಲ್ಲ ಎಂದರು.
ಒಳ ಮೀಸಲಾತಿ ಜಾರಿ ಮಾಡಿ, ಇಲ್ಲ మిజి ಖಾಲಿ ಮಾಡಿ ఎంబ ಘೋಷವಾಕ್ಯದಡಿ ಮಾ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಮುಖಂಡರಾದ ಎನ್.ರಾಮಾಂಜಿನಪ್ಪ, ವಳ್ಳೂರು ನಾಗೇಶ್, ಮಂಜುನಾಥ್ ಮಂಗಳವಾಡ, ಕಿಲಾರ್ಲಹಳ್ಳಿ ಈರಣ್ಣ, ಕೆ.ಪಿ.ಲಿಂಗಣ್ಣ, ಟಿ.ಹನುಮಂತರಾಯಪ್ಪ, ಮೀನಕುಂಟನಹಳ್ಳಿ ನರಸಿಂಹಪ್ಪ, ಬಿ.ಹೊಸಹಳ್ಳಿ ಮಲ್ಲಿಕಾರ್ಜುನ, ನಲಿಗಾನಹಳ್ಳಿ ಮಂಜುನಾಥ್, ದೇವಲಕೆರೆ ಹನುಮಂತರಾಯ, ಪಳವಳ್ಳಿ ನರಸಿಂಹಪ್ಪ, ಶಿವಶಂಕರ್, ಬಂಗಾರಪ್ಪ, ರವಿ, ನಾರಾಯಣಪ್ಪ ಮತ್ತಿತರರು ಇದ್ದರು.
ವರದಿ: ಶಿವಾನಂದ