ನಿಪ್ಪಾಣಿ :ದೇವಸ್ಥಾನಗಳು ನೆಮ್ಮದಿ ಹಾಗೂ ಸಮಾಧಾನದ ಪವಿತ್ರ ಸ್ಥಾನಗಳು ಎಂದು ಚಿಕ್ಕೋಡಿ ಚರಮೂರ್ತಿಮಠದ ಸಂಪಾದನಾ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.
ಅವರು ಚಿಕ್ಕೋಡಿ ತಾಲ್ಲೂಕಿನ ಶ್ರೀಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನ ದಿಂದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ 30 ಲಕ್ಷ ಅನುದಾನದ ಮಂಜೂರಿ ಪತ್ರ ವಿತರಣೆ ಸಮಾರಂಭದಲ್ಲಿ ಸಾನಿಧ್ಯತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಸುಕ್ಷೇತ್ರ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾದ 30 ಲಕ್ಷ ರೂಪಾಯಿಗಳ ಆದೇಶ ಪತ್ರವನ್ನು ಶಾಸಕ ಗಣೇಶ ಹುಕ್ಕೇರಿ ದೇವಸ್ಥಾನ ಕಮಿಟಿಯ ಸದಸ್ಯರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ತೋರಣಳ್ಳಿ ಹನುಮಾನ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಕರ್ನಾಟಕ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಮ್ಮ ನಾಯಕರಾದ ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ನಾನು 30 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಿದ್ದೇವೆ. ಈಗಾಗಲೇ ಮಂದಿರದ ಆವರಣದಲ್ಲಿ ಶನಿ ಮಂದಿರ ನಿರ್ಮಾಣದ ಕಾರ್ಯ ಕೈಗೊಂಡಿದ್ದೇವೆ. ಮಂದಿರದ ಅಭಿವೃದ್ಧಿಗಾಗಿ ಮಹಾರಾಷ್ಟ್ರದ ಸಚಿವ ಹಸನ ಮುಶ್ರೀಫ ಅವರು 50 ಲಕ್ಷ ರೂಪಾಯಿ ನೀಡಿದ್ದಾರೆ. ಈ ಮಂದಿರದ ಅಭಿವೃದ್ಧಿಗಾಗಿ ಯಾವಾಗಲೂ ನಮ್ಮ ಸಹಕಾರ ಇರುತ್ತೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಎಸ್.ಕೆ.ಎಂಟಹತ್ತಿನವರ,ರಾಮಾ ಮಾನೆ,ಸುಧಾಮ ಖಾಡಾ,ಬಸವರಾಜ ಮಾಳಗೆ,ಮಾರುತಿ ಸನಲಚಾಪಗೋಳ,ರಮೇಶ ಪಾಟೀಲ, ಅಜೀತ ಪಾಟೀಲ, ಅಭಯ ಪಾಟೀಲ,ಪರಶುರಾಮ ಕಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ ನಿಪ್ಪಾಣಿ




