ಮುಂಬೈ: ಭಾರತ ಕ್ರಿಕೆಟ್ ತಂಡದ ಲಿಟಿಲ್ ಮಾಸ್ಟರ್ ಎಂದೇ ಹೆಸರು ಗಳಿಸಿರುವ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ ‘ಶತಕಗಳ ಶತಕ ( ಶತಕಗಳ ನೂರರ ಗಂಟು) ಸಾಧನೆ ಗೈದು ಈಗ 13 ವರ್ಷ ಕಳೆದಿವೆ.
ಸಚಿನ್ ತೆಂಡೂಲ್ಕರ 2012 ರಲ್ಲಿ ಬಾಂಗ್ಲಾದೇಶದ ಮಿರಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ್ದಾಗ ಅವರಿಂದ ಶತಕಗಳ ಶತಕ ಸಾಧನೆ ಮೂಡಿತ್ತು. ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ವಿರಾಟ್್್ ಕೊಹ್ಲಿ ಈವರೆಗೆ 82 ಶತಕಗಳನ್ನು ಗಳಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಗಿಂತ ಒಂದು ಶತಕ ಅಂದರೆ ಸರಿಯಾಗಿ 50 ಶತಕಗಳನ್ನು ಸಂಪಾದಿಸಿದ್ದಾರೆ.