Ad imageAd image

ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು – ಮುಡುಬಿ ಗುಂಡೇರಾವ್

Bharath Vaibhav
ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು – ಮುಡುಬಿ ಗುಂಡೇರಾವ್
WhatsApp Group Join Now
Telegram Group Join Now

ಬೆಂಗಳೂರು: -ಪೀಣ್ಯ ದಾಸರಹಳ್ಳಿ ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳ ಕೊಡುಗೆ ಅಪಾರ. ನಾಡು ,ನುಡಿ ಸಂಸ್ಕೃತಿಯ ಪರಿಚಯಿಸುವ ಕೆಲಸ ಆಗಬೇಕು ಎಂದು ಉಪನ್ಯಾಸಕ, ಸಾಹಿತ್ಯ ಸಂಶೋಧಕ ಮುಡಬಿ ಗುಂಡೇರಾವ್ ಹೇಳಿದರು.

ಅವರು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮೂರು ನಮಗೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತೆಂಗಳಿ ಶಾಸನಗಳು, ದೇವಾಲಯಗಳು , ವೀರಗಲ್ಲ ಸ್ಮಾರಕಗಳು ಪ್ರಾಚೀನ ಕನ್ನಡಿಗರ ಆಡಳಿತ, ಶಿಕ್ಷಣ,ಧರ್ಮ,ಅಧ್ಯಾತ್ಮ , ಸಮಾಜ ,ಆರ್ಥಿಕ ಮುಂತಾದ ವಿವಿಧ ಕ್ಷೇತ್ರಗಳ ಸಾಧನೆಯನ್ನು ತಿಳಿಸುತ್ತವೆ. ತೆಂಗಳಿ ಒಂದು ಕಾಲಕ್ಕೆ ೭೦ ಹಳ್ಳಗಳಿಗೆ ರಾಜಧಾನಿಯಾಗಿತ್ತು.

ಇಲ್ಲಿ ಈಶ್ವರ ದೇವಾಲಯ ಶಿಕ್ಷಣ ನೀಡುವ ಅಗ್ರಹಾರ ವಾಗಿತ್ತು. ನಾಡಿನ ವಿವಿಧ ಪ್ರದೆಶಗಳಿಂದ ವಿದ್ಯಾರ್ಥಿಗಳು ಕನ್ನಡ ವಿವಿಧ ವಿಷಗಳನ್ನು ಕಲಿಯಲು ಆಗಮಿಸುತ್ತಿದ್ದರು. ತೆಂಗಳಿ, ಮಂಗಲಗಿ , ಕಾಳಗಿ , ಮರ್ತೂರ , ಇಂಗಳಿಗಿ , ದಂಡೋತಿ , ಮಾನ್ಯಖೇಡ್, ಸನ್ನತಿ ಹೀಗೆ ಮುಂತಾದ ಪವಿತ್ರ ತಾಣಗಳು ಪ್ರವಾಸಿ ಕೇಂದ್ರಗಳು ಎಲ್ಲ ಅರ್ಹತೆ ಹೊಂದಿವೆ. ಇವುಗಳ ರಕ್ಷಣೆ ಯಾಗಬೇಕು. ಇವುಗಳು ಇತಿಹಾಸ ಪಠ್ಯಕ್ರಮದಲ್ಲಿ ಸೇರಬೆಕು ಎಂದರು. ನಮ್ಮೆಲ್ಲರ ನಡೆ ಸ್ಮಾರಕಗಳ ರಕ್ಷಣೆಯ ಕಡೆಗೆ ಸಾಗಬೇಕು ಐತಿಹಾಸಿಕ ಜಾಗ್ರತೆ ಮಾಡುವುದು ಅತ್ಯಅವಶ್ಯ ಎಂದು ಮುಡಬಿ ಗುಂಡೇರಾವ್ ಮಾತನಾಡಿದರು.

ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಐತಿಹಾಸಿಕ ಸ್ಮಾರಕಗಳ ಸಾಹಿತ್ಯ ರಚಿಸಿ ಪ್ರಕಟಣೆಗೊಳಿಸುವ ಉದ್ದೇಶ ಕಾಳಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ ಕುಡಳ್ಳಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ. ಶಾಂತಸೋಮನಾಥ
ಶಿವಾಚಾರ್ಯರು ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.

ಟೆಂಗಳಿ ಬೆಣ್ಣೆತೊರೆ ಹಳ್ಳದ (ನದಿ)ತಿಳಿ ನೀರಿನ ದಡದಲ್ಲಿದ್ದು, ತಂಗಾಳಿ ಹವೆಯಲ್ಲಿ ತಂಪಾಗಿ ಜೀವಿಸಿ ಬಾಳಿ ಬದುಕಿ ನಿಸ್ವಾರ್ಥ ರಾಜಕಾರಣಿಗಳು, ಯೋಧರು ಸೇರಿ ದೇಶ ಸೇವೆ ಮಾಡಿದ, ಶಿಕ್ಷಣ ಸಂಸ್ಥೆ ಹುಟ್ಟುಹಾಕಿದ ಮಹಾತ್ಮರ ವ್ಯಕ್ತಿತ್ವ ನಮಗೆ ಪ್ರೇರಣೆ, ಕಡಲೆ, ತೊಗರಿ, ಜೋಳ ಬೆಳೆಯುವ ನೆಲ ಈಗ ಔಷಧಿ ಬೆಳೆಗಳು ಬೆಳೆಯುತ್ತಿರುವ ನಮ್ಮ ನೆಲ, ಗ್ರಾಮದ ಹಮ್ಮಿ ಎಂದು ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ತೆಂಗಳಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ತೆಂಗಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಭಿಮಾಶಂಕರ್ ಅಂಕಲಿಗಿ ಅಧ್ಯಕ್ಷತೆ ವಹಿಸಿ ಸರ್ವರಿಗೂ ಸ್ವಾಗತಿಸಿದರು. ತೆಂಗಳಿ ಕಸಪ ಪದಾಧಿಕಾರಿಗಳಾದ ಜಗಧೀಶ ಕೆಶ್ವಾರ್ ,ರಾಜಕುಮಾರ್ ಪಟೇದ್ , ಮಹಮ್ಮದ ಲದಾಫ್ , ಪ್ರಶಾಂತ್ ಹಳ್ಳಿ , ವಿಶ್ವನಾಥ್ ಬಾಳದೆ , ಬಸವರಾಜ್ ಬೋಧನ , ವಿಶ್ವೇಶ್ವರಯ್ಯ ಶಾಲೆ ಮುಖ್ಯೋಪಾಧ್ಯಾಯ ಶರಣಬಸಪ್ಪಾ ಮುನ್ನಳ್ಳಿ, ಶಿಕ್ಷಕಿಯರಾದ ನಿರ್ಮಲಾ ಮಠಪತಿ , ಬಸಮ್ಮ ಹಲಚೆರಿ, ಭವಾನಿ ಮಠಪತಿ, ಚನ್ನಮ್ಮ ಜಂಬಗಿ,ಸ್ನೇಹಾ ಭಯ್ಯಾರ, ತೆಂಗಳಿ ಗ್ರಾಮದ ಸಮಸ್ತ ಹಿರಿಯ ಮುಖಂಡರು ಮಹಿಳೆಯರು ನಾಗರಿಕ ಬಂಧು ಭಗನಿಯರು ಭಾಗವಹಿಸಿದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!