ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರ DYSP ಅವರ ತಾಯಿ ಹಾಗೂ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ನಗರದ ಹೊರವಲಯದ ತಮಟಕಲ್ಲು ಬ್ರಿಡ್ಜ್ ಬಳಿ ಲಾರಿಗೆ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.ಕಾರಲ್ಲಿದ್ದ ಮೂವರು ಗಾಯಾಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಹೊರಟಿದ್ದ ಇನ್ನೋವಾ ಕಾರಿನ ಪ್ರಯಾಣಿಕರು, ಮಹಾರಾಷ್ಟ್ರದ ಕೊಲ್ಲಾಪುರ DYSP ವೈಷ್ಣವಿ ಅವರ ಕಾರು ಇದಾಗಿದ್ದು, ಅಪಘಾತದಲ್ಲಿ Dysp ವೈಷ್ಣವಿ ತಾಯಿ ಕಮಲ ಹರಿಬಾಬು(69) ಹಾಗೂ ಕಾರುಚಾಲಕ ರಾಕೇಶ್(40) ಸಾವನ್ನಪ್ಪಿದ್ದಾರೆ. ಗಾಯಾಳು Dysp ವೈಷ್ಣವಿ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




