Ad imageAd image

ಭೀಕರ ರಸ್ತೆ ಅಪಘಾತ, ಎರಡು ಕಾರಗಳ ಮಧ್ಯ ಮುಖಮುಖಿ ಡಿಕ್ಕಿ ನಜ್ಜುಗುಜ್ಜಾದ ಕಾರಗಳು

Bharath Vaibhav
ಭೀಕರ ರಸ್ತೆ ಅಪಘಾತ, ಎರಡು ಕಾರಗಳ ಮಧ್ಯ ಮುಖಮುಖಿ ಡಿಕ್ಕಿ ನಜ್ಜುಗುಜ್ಜಾದ ಕಾರಗಳು
WhatsApp Group Join Now
Telegram Group Join Now

ರಾಮದುರ್ಗ :-ತಾಲೂಕಿನ ಮುಳ್ಳೂರ ಘಾಟ್ ನಲ್ಲಿ ಭೀಕರ ರಸ್ತೆ ಅಪಘಾತ, ಎರಡು ಕಾರಗಳ ಮಧ್ಯ ಮುಖಮುಖಿ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರಗಳು ದುರ್ಗಘಟನೆ ನಡೆದಿದೆ, ತಿರುವುನಲ್ಲಿ ವೇಗವಾಗಿ ಚಲಿಸುತಿದ್ದ ಎರಡು ಕಾರಗಳ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ಕಾರಗಳು ನಜ್ಜುಗುಜ್ಜಾಗಿ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ ಸ್ಥಳಕ್ಕೆ 108 ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಗೆ 108 ಸಿಬ್ಬಂದಿಯಾದ ಚಾಲಕ ಪ್ರಶಾಂತ್ ಸ್ಟಾಫ್ ನರ್ಸ್ ಹಾಗೂ ಸತೀಶ್ ಕುಮಾರ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಧಾಖಲೆ ಮಾಡಲಾಯಿತು.

ರಾಮದುರ್ಗ ಕಡೆಯಿಂದ ಸವದತ್ತಿ ಕಡೆಗೆ ಹೊರಟಿರುವ ಕಾರು ಹಾಗೂ ಧಾರವಾಡ ಕಡೆಯಿಂದ ರಾಮದುರ್ಗಕಡೆ ಬರತಿದ್ದ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಸವದತ್ತಿ ಕಡೆಗೆ ಹೊರಟಿರುವ ಕಾರಿನಲ್ಲಿ ಪ್ರಯಾಣಿಕರು ಹಾಗೂ ರಾಮದುರ್ಗಕಡೆಗೆ ಬರತಿದ್ದ ಕಾರಿನಲ್ಲಿ ಸೇರಿದಂತೆ ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ಚೆನ್ನಪ್ಪ ಬಳಲಿಮಟ್ಟಿ, ನೀಲಾಂ ಬಳಲಿಮಟ್ಟಿ,ತಾರಾ ಕರಿಗೌಡರ್, ಸಂಚಿತ್ ಬಳಲಿಮಟ್ಟಿ,ಮತ್ತು ಕೃಷ್ಣ ಬಿಸಾನಿ, ಪ್ರಯಾಣಿಸುತ್ತಿದ್ದರು ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ ಈವರಿಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ನೀಡಿ ಹೆಚ್ಚಿನ ಚಿಕೆತ್ಸೆಗಾಗಿ ಬಾಗಲಕೋಟ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಮುಳ್ಳೂರ ಘಾಟ್ ತಿರುವಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:-ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
Share This Article
error: Content is protected !!