ಲಾಡ್ಸ್ ( ಲಂಡನ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಿನ್ನೆ ಇಲ್ಲಿ ಮುಗಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ವೀರೋಚಿತ ಸೋಲು ಎದುರಾಯಿತು.

ಕ್ರಿಕೆಟ್ ಕಾಶಿ ಖ್ಯಾತಿಯ ಅಂಗಳದಲ್ಲಿ ನಿನ್ನೆ ಮುಕ್ತಾಯವಾದ ಪಂದ್ಯದಲ್ಲಿ ಭಾರತ ಗೆಲ್ಲಲು ಕೊನೆಯ ವರೆಗೆ ನಡೆಸಿದ ಹೋರಾಟ ಫಲ ನೀಡಲಿಲ್ಲ. ಇಂಗ್ಲೆಂಡ್ 22 ರನ್ ಗಳಿಂದ ಗೆದ್ದು ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿತು.
ಗೆಲ್ಲಲು 193 ರನ್ ಗಳ ಸುಲಭದ ಗುರಿ ಹೊಂದಿದ್ದರೂ ಭಾರತ ದ್ವಿತೀಯ ಸರದಿಯಲ್ಲಿ 170 ರನ್ ಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ತಂಡವನ್ನು ಗೆಲ್ಲಿಸಲು ರವೀಂದ್ರ ಜಡೆಜಾ ನಡೆಸಿದ ಯತ್ನ ಫಲ ನೀಡಲಿಲ್ಲ. ರವೀಂದ್ರ ಜಡೆಜಾ ಅಜೇಯ 61 ರನ್ ಗಳಿಸಿದರು. ಕೆ.ಎಲ್. ರಾಹುಲ್ 31 ರನ್ ಗಳಿಸಿದರು.




