ಲಂಡನ್: ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿನ ಕೆನಿಂಗ್ಟನ್ ಓವೆಲ್ ಮೈದಾನದಲ್ಲಿ ನಡೆದಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 374 ರನ್ ಗಳಿಸಬೇಕಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಗೆ 50 ರನ್ ಗಳಿಸಿದ್ದು, ಜಯಿಸಲು ಇನ್ನು 324 ರನ್ ಗಳಿಸಬೇಕಿದೆ.
ಮೂರನೇ ದಿನದಾಟ ಮುಗಿದಾಗ 34 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಉರುಳಿದ ಒಂದು ವಿಕೆಟ್ ಅನ್ನು ಮೊಹ್ಮದ ಸಿರಾಜ್ ಪಡೆಯಲು ಯಶಸ್ವಿಯಾದರು. ಇದಕ್ಕೆ ಮುನ್ನ ಭಾರತ ತನ್ನ ದ್ವಿತೀಯ ಸರದಿಯಲ್ಲಿ 396 ರನ್ ಗಳಿಸಿತ್ತು. ಹೀಗಾಗಿ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಅಳಿಸಿ ಹಾಕಿ ಭಾರತ ಒಟ್ಟಾರೆ 374 ರನ್ ಗಳ ಮುನ್ನಡೆ ಹೊಂದಿತ್ತು.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 247
ಹಾಗೂ 1 ವಿಕೆಟ್ ಗೆ 50
ಭಾರತ ಮೊದಲ ಇನ್ನಿಂಗ್ಸ್ 224
ಭಾರತ ದ್ವಿತೀಯ ಇನ್ನಿಂಗ್ಸ್ 396




