ಬುಲಾವಾಯೋ ( ಜಿಂಬಾಬ್ವೆ): ಪ್ರವಾಸಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಜಿಂಬಾಬ್ವೆ ವಿರುದ್ಧ ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಇನ್ನಿಂಗ್ಸ್ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ಕ್ವೀನ್ಸ್ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ಮೊದಲ ದಿನದಾಟ ಮುಗಿದಾಗ ನ್ಯೂಜಿಲೆಂಡ್ ತಂಡವು ತನ್ನ ಮೊದಲ ಸರದಿಯಲ್ಲಿ 1 ವಿಕೆಟ್ ಗೆ 174 ರನ್ ಗಳಿಸಿದ್ದು, 49 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಇದಕ್ಕೆ ಮುನ್ನ ಇಂದು ಮುಂಜಾನೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಜಿಂಬಾಬ್ವೆ ತಂಡವು ತನ್ನ ಮೊದಲ ಸರದಿಯಲ್ಲಿ 125 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು.
ಸ್ಕೋರ್ ವಿವರ
ಜಿಂಬಾಬ್ವೆ ಮೊದಲ ಇನ್ನಿಂಗ್ಸ್ 125
ಬ್ರೆಂಡನ್ ಟೇಲರ್ 44, ತಪಾಜ್ವಾ ಸಿಗಾ 33, ಮ್ಯಾಟ್ ಹೆನ್ರಿ 40 ಕ್ಕೆ 5, ಜಾಕ್ರಿ ಪೋಲ್ಕಸ್ 38 ಕ್ಕೆ 4)
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 1 ವಿಕೆಟ್ ಗೆ 174
(ಡೆವನ್ ಕಾನ್ವೆ ಬ್ಯಾಟಿಂಗ್ 79 ( 120 ಎಸೆತ, 9 ಬೌಂಡರಿ), ವಿಲ್ ಯಂಗ್ 74 ( 101 ಎಸೆತ, 11 ಬೌಂಡರಿ)




