ಲಂಡನ್: ಇಲ್ಲಿನ ಕೆಲ್ಲಿಂಗ್ಟನ್ ಓವೆಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ 2 ನೇ ದಿನದಾಂತ್ಯಕ್ಕೆ ಭಾರತ ತನ್ನ ದ್ವಿತೀಯ ಸರದಿಯಲ್ಲಿ 2 ವಿಕೆಟ್ ಗೆ 75 ರನ್ ಗಳಿಸಿದ್ದು, ಒಟ್ಟಾರೆ 52 ರನ್ ಗಳ ಮುನ್ನಡೆ ಪಡೆದಿದೆ.
ಎರಡನೇ ದಿನದ ಆಟ ಮುಗಿದಾಗ ಯಶಸ್ವಿ ಜೈಸ್ವಾಲ್ (51) ಹಾಗೂ ಆಕಾಶ್ ದೀಪ್ (4) ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಇದಕ್ಕೆ ಭಾರತ ತನ್ನ ಮೊದಲ ಸರದಿಯಲ್ಲಿ 224 ರನ್ ಗಳಿಗೆ ಆಲೌಟಾಗಿದ್ದರೆ, ಇಂಗ್ಲೆಂಡ್ ತನ್ನ ಮೊದಲ ಸರದಿಯಲ್ಲಿ 247 ರನ್ ಗಳಿಸಿತ್ತು.




