ಬುಲಾವಾಯೋ ( ಜಿಂಬಾಬ್ವೆ): ವಿಯಾನ್ ಮಲ್ಡರ್ ಅವರ ಭರ್ಜರಿ ದ್ವೀಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಆತಿಥೇಯ ಜಿಂಬಾಬ್ವೆ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನವೇ ದೊಡ್ಡ ಮೊತ್ತ ಕಲೆ ಹಾಕಿದೆ.
ಕ್ವೀನ್ಸ್ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ದಿನ ದಕ್ಷಿಣ ಆಫ್ರಿಕಾ 4 ವಿಕೆಟ್ ಗೆ 465 ರನ್ ಪೇರಿಸಿದೆ. ವಿಯಾನ್ ಮಲ್ಡರ್ 259 ಎಸೆತಗಳಲ್ಲಿ 264 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಡೆವಾಲ್ಡ್ ಬ್ರೇವಿಸ್ 15 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ದಕ್ಷಿಣ ಆಫ್ರಿಕಾ ತಂಡವು 5.28 ರನ್ ಗಳ ಸರಾಸರಿಯಲ್ಲಿ ರನ್ ಗಳಿಸಿತು.




