ದೆಹಲಿ: ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 7 ವಿಕೆಟ್ ಗಳಿಂದ ಗೆದ್ದುಕೊಂಡಿದ್ದು, ಎರಡು ಟೆಸ್ಟ್ ಗಳ ಸರಣಿಯನ್ನು 2-0 ರಿಂದ ಜಯಿಸಿತು.
ಇಲ್ಲಿನ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಜಯಗಳಿಸಲು 122 ರನ್ ಗಳಿಸಬೇಕಿದ್ದ ಭಾರತ ತಂಡವು 3 ವಿಕೆಟ್ ಗೆ 124 ರನ್ ಗಳಿಸಿ ಸುಲಭ ಜಯ ಸಂಪಾದಿಸಿತು. ಭಾರತದ ಪರವಾಗಿ ದ್ವಿತೀಯ ಸರದಿಯಲ್ಲಿ ಕೆ.ಎಲ್. ರಾಹುಲ್ ಅಜೇಯ 58 ರನ್ ಗಳಿಸಿದರು. ಸಾಯಿ ಸುದರ್ಶನ್ 39 ರನ್ ಗಳಿಸಿದರು.
ಸ್ಕೋರ್ ವಿವರ
ಭಾರತ 518 ಕ್ಕೆ 5 ಡಿಕ್ಲೇರ್ ಹಾಗೂ 3 ವಿಕೆಟ್ ಗೆ 124
ವೆಸ್ಟ್ ಇಂಡೀಸ್ 248 ಹಾಗೂ 390
ಪಂದ್ಯ ಶ್ರೇಷ್ಠ : ಕುಲದೀಪ್ ಯಾದವ್, ಸರಣಿ ಶ್ರೇಷ್ಠ: ರವೀಂದ್ರ ಜಡೆಜಾ




