ಸೇಡಂ : ಕಲಬುರಗಿಯ ಸೇಂಟ್ ಮೇರಿಸ್ ಶಾಲಾ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿ ಶ್ರೀಪಾದ ಸುಧೀರ್ ಪಾಟೀಲ್ ಅವರ ಜನಿವಾರವನ್ನು ತೆಗೆದುಹಾಕಿರುವ ಘಟನೆಯು ಖಂಡನೀಯ. ಶೈಕ್ಷಣಿಕ ಸಂಸ್ಥೆಯಲ್ಲಿ, ರಾಷ್ಟ್ರೀಯ ಪರೀಕ್ಷೆಯ ಸಂದರ್ಭದಲ್ಲಿ ಇಂತಹ ಘಟನೆ ಆತಂಕಕಾರಿ. ಇದು ಶ್ರೀಪಾದ ಸುಧೀರ್ ಪಾಟೀಲ್ ಅವರಿಗೆ ಆದ ಅನ್ಯಾಯ ಮಾತ್ರವಲ್ಲ, ಧಾರ್ಮಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ಕೃತ್ಯ.
ಜನಿವಾರ ಹಿಂದೂ ಧರ್ಮದಲ್ಲಿ ಪವಿತ್ರ ಸಂಕೇತ. ಇದನ್ನು ತೆಗೆಯಲು ಒತ್ತಾಯಿಸುವುದು ಶ್ರೀಪಾದ ಸುಧೀರ್ ಪಾಟೀಲ್ ಅವರ ಧಾರ್ಮಿಕ ಭಾವನೆಗಳಿಗೆ ಅವಮಾನ. ಪರೀಕ್ಷಾ ನಿಯಮಗಳು ಭದ್ರತೆಗಾಗಿ ಇರಬೇಕು, ಧಾರ್ಮಿಕ ಚಿಹ್ನೆ ತೆಗೆಯಲು ಅಲ್ಲ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅಂಕಿತಕುಮಾರ ಜೋಶಿ ವಕೀಲರು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಸೇಡಂ ರವರು ಖಂಡಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್