Ad imageAd image

ಸುಲೇಪೇಟ ವಿದ್ಯುತ್ ಘಟಕ ಕಚೇರಿಗೆ ಹೋಗುವ ರಸ್ತೆ ದುರಸ್ತಿಗೆ ಒತ್ತಾಯ

Bharath Vaibhav
ಸುಲೇಪೇಟ ವಿದ್ಯುತ್ ಘಟಕ ಕಚೇರಿಗೆ ಹೋಗುವ ರಸ್ತೆ ದುರಸ್ತಿಗೆ ಒತ್ತಾಯ
WhatsApp Group Join Now
Telegram Group Join Now

ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ್ ಗ್ರಾಮದಲ್ಲಿ ವಿದ್ಯುತ್ ಘಟಕ ಕಚೇರಿಗೆ ಹೋಗಬೇಕಾದರೆ ಸುರಕ್ಷಿತವಾದ ರಸ್ತೆ ಇಲ್ಲದ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಹಾಗೂ ಅಲ್ಲಿ ವಾಸಿಸುವಂತಹ ಜನರಿಗೆ ಶಾಲೆಗೆ ಹೋಗುವಂತ ಮಕ್ಕಳಿಗೆ ಅನಾನುಕೂಲವಾಗುತ್ತಿದೆ.

ಮಳೆ ಬಂದಾಗ ಆ ಒಂದು ಓಣಿಗೆ ಹೋಗಲು ರಸ್ತೆನೇ ಗೊತ್ತಾಗುವುದಿಲ್ಲ ರಸ್ತೆ ತುಂಬಾ ನೀರು, ಕೆಸರು ಹೀಗೆ ಹತ್ತು ಹಲವರು ಸಮಸ್ಯೆಗಳನ್ನು ಈ ಒಂದು ವಿದ್ಯುತ್ ಘಟಕ ಕೇಂದ್ರಕ್ಕೆ ಹೋಗುವಂತ ರಸ್ತೆಯಲ್ಲಿ ಸಮಸ್ಯೆ ಕಂಡು ಬರುತ್ತದೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಒಂದು ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ.

ಇಲ್ಲಿ ಹೋಗಲು ಒಂದು ಸಿಸಿ ರಸ್ತೆ ಅಳವಡಿಸಬೇಕು ಇಲ್ಲಿ ವಾಸಿಸುವಂತಹ ಸಿಬ್ಬಂದಿ ವರ್ಗದವರಿಗೆ ಮನೆಯಿಂದ ಹೊರಗಡೆ ಬರಲು ವಾಹನಗಳ ಮೇಲೆ ಹೋಗಲು ರಸ್ತೆ ಇಲ್ಲದ ಕಾರಣಕ್ಕಾಗಿ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಕಾಲ್ನಡಿಗೆ ಮೂಲಕ ಊರು ಒಳಗಡೆ ಬರುವಂತಹ ವ್ಯವಸ್ಥೆ ನಾವು ನೋಡುತ್ತೇವೆ ಎಂದು ಸಾರ್ವಜನಿಕರು ದೂರಾಗಿದೆ ಸಂಬಂಧ ಪಟ್ಟ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಪರಿಹಾರ ಕೊಂಡುಕೊಳ್ಳಬೇಕು ಎಂದು ಗ್ರಾಮಸ್ಥರ ಆಗರವಾಗಿದೆ.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!