——————————————————ಅಕ್ಕ ಮಹಾದೇವಿ ಜಯಂತಿ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ವಿಘ್ನೇಶ್ವರ ಬಡಾವಣೆಯಲ್ಲಿ ಅಕ್ಕನ ಬಳಗ ಮಹಿಳಾ ಸಮಾಜದ 12ನೇ ವರ್ಷದ ವಾರ್ಷಿಕೋತ್ಸವ ಮತ್ತು ಅಕ್ಕ ಮಹಾದೇವಿ ಜಯಂತಿ ಆಚರಣೆಯನ್ನು ಅಕ್ಕನ ಬಳಗ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷ ಸಿ ಎಸ್ ಆರಾಧ್ಯ ಮತ್ತು ಮಹಿಳಾ ಅಧ್ಯಕ್ಷೆ ಪ್ರೇಮಾ ಆರಾಧ್ಯ ಇವರ ನೇತೃತ್ವದಲ್ಲಿ ದಿನಾಂಕ 08 ಜೂನ್ 2025ರಂದು ಭಾನುವಾರ ಬೆಳಗ್ಗೆ 9ಗಂಟೆಗೆ ಕಾರ್ಯ ಕ್ರಮ ‘ಉದ್ಘಾಟನೆ ಮತ್ತು ಪ್ರವಚನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಚನ ಗಾಯನ’ ಜರುಗಲಿದ್ದು.ಪೂಜ್ಯ ಶ್ರೀ ಓಂಕಾರೇಶ್ವರಿ ಅಕ್ಕ ಅಧ್ಯಕ್ಷರು ಬಸವ ಧ್ಯಾನ ಸೆಂಟರ್ ಇವರು ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ: ಎಸ್ . ಮುನಿರಾಜು ಶಾಸಕರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ಬಿ.ಸುರೇಶ್ : ಅಧ್ಯಕ್ಷರು ಬಿಜೆಪಿ ಶೆಟ್ಟಿಹಳ್ಳಿ ವಾರ್ಡಿನ ದಾಸರಹಳ್ಳಿ ಕ್ಷೇತ್ರ. ಆಗಮಿಸಲಿದ್ದಾರೆ.
ಅಕ್ಕನ ಬಳಗ ಮಹಿಳಾ ಸಮಾಜದ ಪದಾಧಿಕಾರಿಗಳು ವಿವಿಧ ಸಮಾಜದ ಮುಖಂಡರು ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ ಸಿ ಎಸ್ ಆರಾಧ್ಯ ಭಾರತ ವೈಭವ ಹಾಗೂ ಬಿ ವಿ ನ್ಯೂಸ್-5 ಚಾನಲ್ ಗೆ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




