ಸೇಡಂ: ಪಟ್ಟಣದ ಪುರಸಭೆ ಅಧ್ಯಕ್ಷರಾದ ವೀರೇಂದ್ರ ನಾಗೇಂದ್ರಪ್ಪ ರುದ್ನೂರ್ ರವರು ಪಟ್ಟಣದಲ್ಲಿ ಸ್ವಚ್ಚತೆಯನ್ನು ಕಾಪಾಡಲು ಹೊಸ ಯಂತ್ರೀಕರಣ ಬಳಿಕೆಯಲ್ಲಿ ತಂದಿದ್ದು ತುಂಬಾ ಸಂತೋಷದ ತಂದಿದೆ.
ಇದೇ ರೀತಿ ಬೆಂಗಳೂರು ಮಹಾನಗರದಲ್ಲಿ ಮಣ್ಣು ಮತ್ತು ಕಸವನ್ನು ಎಳೆಯುವ ಯಂತ್ರಗಳನ್ನು ಕೂಡ ಸೇಡಂ ಗೆ ತರುವರು ಎಂಬ ನಂಬಿಕೆ ಇದೆ ಎಂದು ಸೇಡಂ ನ ಆಶ್ರಯ ಕಾಲೋನಿ ನಿವಾಸಿ ಅಶೋಕ್ ಬುದೂರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸೇಡಂ ಪಟ್ಟಣದಲ್ಲಿ ವಾಸದತ್ತ ಸಿಮೆಂಟ್ ಕಾರ್ಖಾನೆ ಇದ್ದು ರಸ್ತೆಗೆ ದೂಳು ಎದ್ದು ಬರುತ್ತಿದೆ ಅದನ್ನು ಸ್ವಚ್ಚತೆ ಪಡಿಸಲು ವಿಶೇಷ ಯಂತ್ರಗಳು ಇರುತ್ತೇವೆ ಅಂತಹ ಯಂತ್ರಗಳನ್ನು ನಮ್ಮ ಸೇಡಂ ಪಟ್ಟಣಕ್ಕೆ ಕೂಡ ತರಬೇಕು ಎಂದು ಪ್ರಜಾ ಸೇವಕ ಶೇಖರ್ ಸೇಡಂ ಅವರು ಮನವಿ ಮಾಡಿಕೊಂಡಿದ್ದಾರೆ.
ಪುರಸಭೆ ಅಧ್ಯಕ್ಷರು ಹಾಗೂ ವಾಸವಾದತ್ತ ಸಿಮೆಂಟ್ ಕಾರ್ಖಾನೆ ಯೂನಿಯನ್ ಗೌರವಾಧ್ಯಕ್ಷರಾದ ವೀರೇಂದ್ರ ನಾಗೇಂದ್ರಪ್ಪ ರುದ್ನೂರ್ ಅವರಿಗೆ ಸೇಡಂ ಜನತೆ ತನ್ನ ಅಭಿವೃದ್ಧಿಯ ಕೆಲಸಗಳಿಗೆ ಅಭಿನಂದನೆ ವ್ಯಕ್ತಪಡಿಸಿ ಧನ್ಯವಾದಗಳು ತಿಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.