ಜಾರ್ಖಂಡ್ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 28 ಅಮಾಯಕರನ್ನು ಬರ್ಬರವಾಗಿ ಕೊಂದ ಘಟನೆಗೆ ಇಡೀ ದೇಶವೇ ದುಃಖ ವ್ಯಕ್ತಪಡಿಸುತ್ತಿದೆ.
ವಿಶ್ವದ ಇತರೆ ದೇಶಗಳ ನಾಯಕರು ಕೂಡ ಈ ಕ್ರೂರ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.ಆದರೆ, ಜಾರ್ಖಂಡ್‌ನ ಬೊಕಾರೊ ನಿವಾಸಿ ಮೊಹಮ್ಮದ್ ನೌಶಾದ್ ಎಂಬಾತ ಪ್ರವಾಸಿಗರ ಹತ್ಯಾಕಾಂಡದ ಕುರಿತು ಹರ್ಷ ವ್ಯಕ್ತಪಡಿಸಿದ್ದಾನೆ.
ಧನ್ಯವಾದ ಪಾಕಿಸ್ತಾನ, ಧನ್ಯವಾದಗಳು ಲಷ್ಕರ್-ಎ-ತೈಬಾ. ಅಲ್ಲಾ ಯಾವಾಗಲೂ ನಿಮ್ಮನ್ನು ಸಂತೋಷವಾಗಿಡಲಿ ಎಂದು ಈ ಮೊಹಮ್ಮದ್ ನೌಶಾದ್ ಎಂಬ ದೇಶ ದ್ರೋಹಿ ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರ ದಾಳಿಯ ಕುರಿತು ಸಂತಸ ವ್ಯಕ್ತಪಡಿಸಿದ್ದಲ್ಲದೆ, ಭಯೋತ್ಪಾದಕರು ನಡೆಸಿದ ಕೃತ್ಯವನ್ನು ಬೆಂಬಲಿಸಿದ್ದಾನೆ.
ಈ ಪೋಸ್ಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಬಳಕೆದಾರರು ಜಾರ್ಖಂಡ್ ಪೊಲೀಸರನ್ನು ಟ್ಯಾಗ್ ಮಾಡಿ ಮೊಹಮ್ಮದ್ ನೌಶಾದ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಇದಕ್ಕೆ ಸ್ಪಂದಿಸಿದ ಬೊಕಾರೊ ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಈ ವ್ಯಕ್ತಿಯ ಹಿನ್ನಲೆ ಕಲೆಹಾಕಿರುವ ಪೊಲೀಸರು ಮೊಹಮ್ಮದ್ ನೌಶಾದ್ 35 ವರ್ಷ ವಯಸ್ಸಿನವನಾಗಿದ್ದು, ಬಿಹಾರದ ಮದ್ರಸಾದಲ್ಲಿ ಶಿಕ್ಷಣ ಪಡೆದಿದ್ದಾನೆ.ಆತನ ಸಹೋದರನೊಬ್ಬ ದುಬೈನಲ್ಲಿ ವಾಸಿಸುತ್ತಿದ್ದಾನೆ. ನೌಶಾದ್ ತನ್ನ ತಂದೆಯೊಂದಿಗೆ ಬೊಕಾರೊದಲ್ಲಿ ವಾಸಿಸುತ್ತಾನೆ ಎಂದು ತಿಳಿಸಿದ್ದಾರೆ.