ಕೊಪ್ಪಳ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟವನ್ನ ಹತ್ತಿದ್ದಾರೆ. ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲರು ತಮ್ಮ ಕುಟುಂಬ ಸದಸ್ಯರ ಸಮೇತ ಬಂದಿದ್ದು, ಅಂಜನಾದ್ರಿಯ ಪಾದಗಟ್ಟಿಯ ಬಳಿ ಮೊದಲು ವಿಶೇಷ ಪೂಜೆ ಮಾಡಿಸಿ, ಪ್ರಾರ್ಥನೆ ಮಾಡಿದ್ದಾರೆ.ಇನ್ನು ಇದರ ನಂತರ ಬೆಟ್ಟದ ಮೆಟ್ಟಿಲುಗಳನ್ನ ಹತ್ತಿದ್ದಾರೆ.
ಇನ್ನು ಈ ಸಮಯದಲ್ಲಿ ಜಿಲ್ಲಾಧಿಕಾರಿ ಸುರೇಶ್ ಬಿ ಇಟ್ನಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ಧಿ ರಾಜ್ಯಪಾಲರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹನುಮ ಮಾಲಾಧಾರಿಗಳ ಜೊತೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಅಂಜನಾದ್ರಿ ಬೆಟ್ಟವನ್ನು ಭಕ್ತಿಯಿಂದ ಏರಿ, ಶ್ರೀ ಆಂಜನೇಯ ದರ್ಶನ ಪಡೆದುಕೊಂಡಿದ್ದರು. ನಂತರ ವಾಯುಪುತ್ರ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.




