ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ವಿಶ್ವ ವೀರಶೈವ ಲಿಂಗಾಯತ ವೇದಿಕೆ ಮತ್ತು ಶ್ರೀ ವೀರಶೈವ ಲಿಂಗಾಯತ ವೇದಿಕೆ ಸಹಯೋಗದಲ್ಲಿ.
ಚಿಕ್ಕಬಾಣವಾರದ ರಾಘವೇಂದ್ರ ಬಡಾವಣೆಯ “ಶ್ರೀ ರಾಘವೇಂದ್ರ ಪವಮಾನ ಮಂದಿರದಲ್ಲಿ” ದಿನಾಂಕ 18 ಮೇ 2025 ರಂದು ಭಾನುವಾರ ಬೆಳಿಗ್ಗೆ 10ಗಂಟೆಗೆ
ನಡೆದಾಡುವ ದೇವರು ಶಿವಕೈ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 118ನೇ ಜನ್ಮದಿನಾಚರಣೆ,14ನೇ ವರ್ಷದ ವಾರ್ಷಿಕೋತ್ಸವ, ಬಸವ ಜಯಂತಿ, ರೇಣುಕಾ ಚಾರ್ಯ ಜಯಂತಿ ಮತ್ತು ಉಚಿತ ಲಿಂಗದೀಕ್ಷೆ ಕಾರ್ಯ ಕ್ರಮ ಆಯೋಜಿಸಲಾಗಿದೆ.
ಉದ್ಘಾಟನೆ:- ಶ್ರೀ.ಷ.ಬ್ರ ಶ್ರೀ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ವೀರಧರ್ಮ ಸಿಂಹಾಸನ ಸಂಸ್ಥಾನ ಮಠ ರಾಜಾಪೂರ ತಾ.ಆನೇಕಲ್,
ಉಚಿತ ಲಿಂಗದೀಕ್ಷೆ ಕೊಡುವವರು:- ಶ್ರೀ.ಷ.ಬ್ರ ಅಭಿನವ ಚನ್ನ ಬಸವರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ಅಂಕಲ ಸಿದ್ದೇಶ್ವರ ಸ್ವಾಮಿ ಜಂಗಮ ಮಠ ಶಿವಾಜಿನಗರ ಬೆಂಗಳೂರು,
ಕಾರ್ಯಕ್ರಮದ ಅಧ್ಯಕ್ಷತೆ: ಜಿ.ಮರಿಸ್ವಾಮಿ ವೀರ ಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು,
ವಿಶೇಷ ಅತಿಥಿಗಳಾಗಿ: ನಟರಾಜ್ ರಾಷ್ಟ್ರಾಧ್ಯಕ್ಷರು ವಿಶ್ವ ವೀರಶೈವ ವೇದಿಕೆ,
ನಂಜುಂಡೇಶ್ ರಾಜ್ಯಾಧ್ಯಕ್ಷರು ವಿಶ್ವ ವೀರಶೈವ ವೇದಿಕೆ, ರಾಜೇಂದ್ರ ಅಧ್ಯಕ್ಷರು ವೀರಶೈವ ಅಭಿವೃದ್ಧಿ ಸಮಿತಿ ಅಬ್ಬಿಗೆರೆ ಸೇರಿದಂತೆ ವೀರ ಶೈವ ಲಿಂಗಾಯತ ಸಮಾಜದ ಮುಖಂಡರು ಮಹಿಳೆಯರು ಮತ್ತು ವಿವಿಧ ಸಮಾಜದ ಮುಖಂಡರು ಮಹಿಳೆಯರು ಮತ್ತು ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಚಿಕ್ಕಬಾಣವಾರದ ವೀರ ಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷ ಎಂ.ಹೆಚ್ ಪಾಟೀಲ್ ಅವರು ಬಿ ವಿ ನ್ಯೂಸ್-5 ಚಾನಲ್ ಗೆ ತಿಳಿಸಿದ್ದಾರೆ.
ವರದಿಗಾರರು: ಅಯ್ಯಣ್ಣ ಮಾಸ್ಟರ್




