Ad imageAd image

ಬಳೇಪೇಟೆಯಲ್ಲಿ ಅದ್ದೂರಿಯಾಗಿ ನೆಡೆದ 134ನೇ ಭೀಮ ಹಬ್ಬ

Bharath Vaibhav
ಬಳೇಪೇಟೆಯಲ್ಲಿ ಅದ್ದೂರಿಯಾಗಿ ನೆಡೆದ 134ನೇ ಭೀಮ ಹಬ್ಬ
WhatsApp Group Join Now
Telegram Group Join Now

ಯಳಂದೂರು: ಪಟ್ಟಣದ ಬಳೆಪೇಟೆಯಲ್ಲಿ ವಿಶ್ವಮಾನವ, ವಿಶ್ವರತ್ನ, ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಭೀಮ ಯುವ ಸೇನೆ ಸಂಘದ ವತಿಯಿಂದ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಯಳಂದೂರು ಠಾಣಾ ಪೊಲೀಸ್ ವೃತ ನೀರಕ್ಷಕರಾದ ಶ್ರೀಕಾಂತ್ ರವರು ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಜೋತಿ ಬೆಳಗಿಸಿ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಶ್ರೀಕಾಂತ್ ರವರು ಅಂಬೇಡ್ಕರ್ ರವರ ಆದರ್ಶಗಳನ್ನು ಪಾಲಿಸಬೇಕು ಅಂಬೇಡ್ಕರ್ ರವರು ದೇಶಕ್ಕೆ ಒಳ್ಳೆಯ ಸಂವಿಧಾನವನ್ನು ನೀಡಿದರೆ, ಅವರಂತೆ ಎಲ್ಲಾರು ಶಿಕ್ಷಣವನ್ನುಪಡೆಯಬೇಕು ಒಂದು ಬಾರಿ ಅಮೇರಿಕಾದ ಅಧ್ಯಕ್ಷರು ಭಾರತಕೆ ಬಂದಾಗ ಭಾರತದ ಮಣ್ಣಿಗೆ ಕೈ ಮುಗಿದು ಬುದ್ಧ, ಅಂಬೇಡ್ಕರ್ ರವರು ಹುಟ್ಟಿರುವ ಮಣ್ಣು ಇದು ಇದಕೆ ನಾನು ಭಾರತವನ್ನು ಇಷ್ಟ ಪಟ್ಟಿದಾರೆ ಅಂತಹ ಮಹಾನ್ ವ್ಯಕ್ತಿ ಹುಟ್ಟಿದು ನಮಗೆ ಹೆಮ್ಮೆಯ ವಿಷಯ ನೀವು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ ನಿಮ್ಮ ಮನೆಮನೆಯಲ್ಲೂ ಅಂಬೇಡ್ಕರ್ ಹುಟ್ಟಲಿ ಎಂದು ತಿಳಿಸಿದರು.

ಯಳಂದೂರು ಠಾಣಾ ಪಿ ಎಸ್ ಐ. ಆಕಾಶ್ ರವರು ಮಾತನಾಡಿ ಅಂಬೇಡ್ಕರ್ ಹಬ್ಬ ಆಚರಣೆಯನ್ನು ಮಾಡುತ್ತಿರುವುದು ಖುಷಿಯ ವಿಚಾರ ಎಲ್ಲರ ಯಾವುದೇ ಗಲಾಟೆ ಮಾಡಿಕೊಳ್ಳದೆ ಆಚರಣೆ ಮಾಡಿ ಅಂಬೇಡ್ಕರ್ ರವರ ತತ್ವ ಸಿದ್ದಂತಾಗಳನ್ನು ಪಾಲಿಸಿ ಅವರ ಪುಸ್ತಕಗಳನ್ನು ಓದಿ ಎಂದು ತಿಳಿಸಿದರು.

ಡಾ.ಬಿ ಆರ್ ಅಂಬೇಡ್ಕರ್ ಭಾವ ಚಿತ್ರವನ್ನು ಬಲೇಪೇಟೆಯಿಂದ ಯಳಂದೂರು ಪಟ್ಟಣದ ಪ್ರಮುಖ ಬೀದಿಗಳಿಗೆ ಮೆರವಣಿಗೆಯ ಮೂಲಕ ಸಾಗಿ ಜಯಂತಿಯನ್ನಯ ಆಚರಿಸಲಾಯಿತು. ಮೆರವಣಿಗೆಯಲ್ಲಿ ಎಲ್ಲಾರೂ ಬಿಳಿ ಶರ್ಟ್ ಹಾಗೂ ನೀಲಿ ಶಾಲು ಧರಿಸಿ ಅಂಬೇಡ್ಕರ್ ಘೋಷಣೆಯನ್ನು ಕೂಗಿದರು.

ಯಳಂದೂರು ಪಟ್ಟಣದ ಬಲೇಪೇಟೆಯಲ್ಲಿ ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತು. ಬಳೇಪೇಟೆ ಯಿಂದ ಪಟ್ಟಣದ ಹೃದಯಭಾಗದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು
ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸದರು.

ವಿಶೇಷವಾಗಿ ಮಹಿಳೆಯರು ಕುಣಿದು ಭೀಮ ಹಬ್ಬಕೆ ಮೆರಗು ತಂದರು. ಈ ಸಂದರ್ಭದಲ್ಲಿ ಭೀಮ ಯುವ ಸೇನೆಯ ಪದಾಧಿಕಾರಿಗಳು ಸದ್ಯಸರು ಹಾಗೂ ಯಜಮಾನ್ರುಗಳು ಮಹಿಳೆಯರು ವಿದ್ಯಾರ್ಥಿಗಳು ಮುಖಂಡರು ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!