ಕಾಳಗಿ : ವಿಶ್ವರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಸಮಿತಿ ಕಾಳಗಿ ವತಿಯಿಂದ ರೋಹಿತ್ ಎಮ್ ನಾಗೂರ್ 133ನೇ ಡಾ, ಬಿ ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಮತ್ತು ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ದಿನಾಂಕ ನಿಗದಿ ಪಡಿಸುವ ಕುರಿತು ಸಭೆ ಕರೆಯಲಾಯಿತ್ತು.
ಡಾ ಬಿ ಆರ್ ಅಂಬೇಡ್ಕರ್ ರವರ 133ನೇ ಜಯಂತಿಯ ಅಧ್ಯಕ್ಷ ರೋಹಿತ್ ಎಮ್ ನಾಗೂರ ಅವರ ನೇತೃತ್ವದಲ್ಲಿ, ಪ್ರಗತಿಪರ ಚಿಂತಕರು, ಅಂಬೇಡ್ಕರ್ ಹಿತೈಷಿಗಳು, ದಲಿತಪರ ಸಂಘಟನಾಕಾರರು, ದಲಿತ ಮುಖಂಡರು ಮೆಚ್ಚುವಂತೆ 133ನೇ ಜಯಂತಿಯನ್ನು, ಮೆರವಣಿಗೆಯೊಂದಿಗೆ ತುಂಬಾ ಅಚ್ಚು ಕಟ್ಟಾಗಿ, ವಿಜೃಂಭಣೆಯಿಂದ ಜರುಗುವುದರ ಜೊತೆಗೆ, ಅಂಬೇಡ್ಕರ್ ಅನುವಾಯಿಗಳಿಂದ ಅನೇಕ ಅರ್ಥಪೂರ್ಣ ವಿಷಯಗಳು ವಿಚಾರಗಳು ಕಾಳಗಿ ತಾಲೂಕಕ್ಕೆ ಮಾದರಿಯಾಗಿದ್ದವು, ಅದೇ ರೀತಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಇನ್ನೂ ವಿಜೃಂಭಣೆಯಿಂದ ಜರುಗಲಿ ಎಂದು, ಏಪ್ರಿಲ್ 14 ರಂದು ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಹೊಸ ಸಮಿತಿ ರಚನೆ ಮಾಡಲು ಸಮಿತಿಯ ಸರ್ವ ಸದಸ್ಯರ ವಿಚಾರಣೆಯೊಂದಿಗೆ ದಿನಾಂಕ 26/03/2025 ರಂದು ಬೆಳ್ಳಿಗೆ 11:00 ಗಂಟೆಗೆ ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ ಸಮುದಾಯ ಭವನ ಕಾಳಗಿಯಲ್ಲಿ ಸಭೆ ಸೇರಬೇಕು, ಹಾಗೂ ಈ ಸಭೆಗೆ ಅತೀ ಹೆಚ್ಚು ಉತ್ಸಾಹದಿಂದ ದಲಿತ ಬಾಂಧವರು, ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆಗಳ ಮುಖಂಡರು, ಭಾಗವಹಿಸಿ ಸಮಿತಿಯ ರಚನೆಗೆ ಸಹಕರಿಸಬೇಕೆಂದು,ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಮಹೇಂದ್ರ ಕೊಳ್ಳಿ ಅವರು ತಿಳಿಸಿದ್ದರು ಹಾಗೂ ನಾಗರಾಜ್ ಬೇವಿನಕಾರ್ ಅವರು ಅನೇಕ ವಿಷಯದ ಬಗ್ಗೆ ಮಾತನಾಡಿದರು,
ಈ ಸಂಧರ್ಭದಲ್ಲಿ : ಬಾಬುರಾವ ಡೊಣ್ಣೂರು, ಸಿದ್ದು ನಾಗೂರ,ಬಸವರಾಜ, ಖತಲಪ್ಪ ಅಂಕನ, ಅನಿಲ ಗಂಜಗಿರಿ,ಸೂರ್ಯಕಾಂತ ಮಂತಾ, ಗೌತಮ್ ಅನೇಕರು ಈ ಸಭೆಯಲ್ಲಿ ಭಾಗವಹಿಸಿದರು,
ವರದಿ : ಹಣಮಂತ ಕುಡಹಳ್ಳಿ