ಅಥಣಿ :ತಾಲೂಕಿನ ಮಲಾಬಾದ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೇವನೂರ ಗ್ರಾಮದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ವಿಜೃಂಭನೆಯಿಂದ ಆಚರಣೆ ಮಾಡಲಾಯಿತು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಜ್ಯೋತಿ ಬೆಳಗುವ ಮೂಲಕ ಜಯಂತ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ದಯಾನಂದ ವಾಘಮಾರೆ ವಕೀಲರು ಮಾತನಾಡಿ ಬಾಬಾಸಾಹೇಬರು 1891 ರಲ್ಲಿ ಜನಿಸಿದರೂ ಅವರ ವಿಚಾರಗಳು ಇಂದಿಗೂ ಜೀವಂತವಾಗಿವೆ. ಅಸ್ಪೃಶ್ಯತೆ ವಿರುದ್ಧ, ಶೋಷಣೆಯ ವಿರುದ್ಧ, ಅಕ್ಷರಶಃ ಸಮಾನ ಸಮಾಜ ನಿರ್ಮಾಣಕ್ಕಾಗಿ ಅವರು ಜೀವವನ್ನೇ ಮುಡುಪಾಗಿ ಇಟ್ಟಿದ್ದರು. ಇಂದು ಅವರು ನಮ್ಮ ಪ್ರತಿಯೊಬ್ಬರ ಜೀವನಕ್ಕೂ ಬಾಬಾಸಾಹೇಬ್ ಅಂಬೇಡ್ಕರ್ ಸ್ಪೂರ್ತಿಯಾಗಿರುವ ವ್ಯಕ್ತಿತ್ವ ಹೊಂದಿದ್ದರು ಅವರ ಜೀವನ ವಿಶ್ವ ಮಾನ್ಯವಾಗಿದೆ. ಅವರ ತತ್ವ ಆದರ್ಶಗಳನ್ನು, ವಿಚಾರಧಾರೆಗಳನ್ನು ಕೇವಲ ಭಾಷಣದಲ್ಲಿ ಹೇಳಿದರೆ ಸಾಲದು, ನಮ್ಮ ಬದುಕಿನಲ್ಲಿ ನುಡಿದಂತೆ ನಡೆದು ತೋರಿಸಿದಾಗ ಮಹಾತ್ಮರ ಜನ್ಮದಿನಾಚರಣೆಗೆ ಒಂದು ಅರ್ಥ ಬರುತ್ತದೆ. ಜ್ಞಾನವೇ ಶಕ್ತಿ, ಶಿಕ್ಷಣದಿಂದ ಮುಕ್ತಿಯನ್ನು ಪಡೆಯಿರಿ ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ಅವರ ಕನಸು ಇಂದಿನ ಯುವ ಪೀಳಿಗೆ ಈ ಸಂದೇಶವನ್ನು ಮನಗಂಡು, ಸದೃಢ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.
ನಂತರ ಬಾಹುಸಾಹೇಬ್ ಕಾಂಬಳೆ ವಕೀಲರು ಉಪನ್ಯಾಸಕರಾಗಿ ಮಾತನಾಡಿದರು ಅಂಬೇಡ್ಕರ್ ಅವರ ಬದುಕಿನ ವಿಚಾರಧಾರೆಗಳನ್ನು ಮನಮುಟ್ಟುವಂತೆ ತಿಳಿಸಿ ಅಂಬೇಡ್ಕರ್ ಅವರು ಭಾರತಕ್ಕೆ ಶ್ರೇಷ್ಠವಾದ ಸಂವಿಧಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ನಮ್ಮೆಲ್ಲರಿಗೆ ಕೇವಲ ಭಾರತರತ್ನವಲ್ಲ, ವಿಶ್ವ ರತ್ನವಾಗಿ ನಮ್ಮೆಲ್ಲರ ಬದುಕಿಗೆ ಬೆಳಕಾಗಿ ಬಂದವರು ಅವರ ವಿಚಾರ ಧಾರೆಗಳು ತತ್ವ ಸಿದ್ಧಾಂತಗಳು ಇಂದಿನ ಯುವ ಪೀಳಿಗೆಗೆ ಸೂರ್ತಿ ಆಗಬೇಕೆಂದು ಹೇಳಿದರು.
ನಂತರ ಶ್ರೀಮತಿ ಗೀತಾ ಬಾಹುಸಾಹೇಬ ಕಾಂಬಳೆ ವಕೀಲರು ಅವರು ಮಾತನಾಡಿದರು ಭಾರತದ ಸಂವಿಧಾನದ ಶಿಲ್ಪಿ, ಸಮಾಜ ಸುಧಾರಕ, ಕಾನೂನು ತಜ್ಞ ಹಾಗೂ ಸಮಾನತೆಯ ಪೋಷಕನಾದ ಡಾ. ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯನ್ನು ದಲಿತ ಸಮೂದಾಯಕ್ಕೆ ಸಿಮಿತ ಮಾಡದೆ ಎಲ್ಲ ಸಮೂದಾಯಗಳು ಒಟ್ಟಿಗೆ ಸೇರಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಆದರ್ಶಗಳನ್ನು ಯುವ ಪೀಳಿಗೆ ಅನುಕರಿಸುವಂತಾಗಬೇಕು ಎಂದು
ಹೇಳಿದರು.ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು
ಈ ಸಂದರ್ಭದಲ್ಲಿ ಪಂಚಾಯತಿ ಕಾರ್ಯದರ್ಶಿಗಳಾದ ಪ್ರಕಾಶ್ ಕುಲಕರ್ಣಿ. ಮಾನವ ಹಕ್ಕುಗಳ ಸೇವಾ ಸಮಿತಿಯ ಅಧ್ಯಕ್ಷರು ದಾವೂದ್ ಮಕಾಂದರ ವಕೀಲರಾದ ಉಮಾಕಾಂತ ವಾಘಮಾರೆ. ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ ಯಮಗಾರ. ಮಾರುತಿ ಕಿರಳೆ ಸದಾಶಿವ ವಾಘಮಾರೆ. ಧೂಳಪ್ಪ ಸನದಿ. ರಾಜು.ಎಮ. ವಾಘಮಾರೆ. ಗ್ರಾಮದ ಹಿರಿಯರಾದ ಮಾರುತಿ ವಾಘಮಾರೆ. ಧ್ಯಾನೋಬಾ ವಾಘಮಾರೆ. ಗೋರಕ ವಾಘಮಾರೆ. ಮಾರುತಿ ಕಾಂಬಳೆ. ಅಶೋಕ್ ಕಾಂಬಳೆ. ರಾಮು ವಾಘಮಾರೆ. ಮತ್ತು ಪ್ರಶಾಂತ್ ರೋಹನ್ ರಾಕೇಶ್ ರಾಮು ಅಕ್ಷಯ್ ಯುವರಾಜ್ ಕುನಾಲ್ ಮಹಾಂತೇಶ್ ಇನ್ನಿತ ದಲಿತ ಮುಖಂಡರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ರಾಜು ಎಲ್ ವಾಘಮಾರೆ ಸ್ವಾಗತಿಸಿ ವಂದಿಸಿದರು.
ವರದಿ :ರಾಜು ವಾಘಮಾರೆ.