Ad imageAd image

ಪ್ರಪಂಚದ 2ನೇ ಅತಿ ದೊಡ್ಡ ವಜ್ರ ಪತ್ತೆ

Bharath Vaibhav
ಪ್ರಪಂಚದ 2ನೇ ಅತಿ ದೊಡ್ಡ ವಜ್ರ ಪತ್ತೆ
WhatsApp Group Join Now
Telegram Group Join Now

ಆಫ್ರಿಕಾ: ಪ್ರಪಂಚದಾದ್ಯಂತ ಅನೇಕ ರೀತಿಯ ವಜ್ರಗಳು ಇರುತ್ತದೆ. ಅದರಲ್ಲೂ ಅವುಗಳ ಬೆಲೆ ಕೇಳಿದರೆ ನಮಗೆ ಶಾಕ್‌ ಆಗುತ್ತದೆ. ಒಂದೊಂದು ವಜ್ರಗಳು ಕೋಟಿ ಕೋಟಿ ಬೆಲೆ ಬಾಳುತ್ತದೆ. ಹಾಗೆಯೇ, ವಿಶ್ವದ ಎರಡನೇ ಅತಿದೊಡ್ಡ ವಜ್ರ ಪತ್ತೆಯಾಗಿದೆ.

ಈ ವಜ್ರ ಅಪರೂಪದಲ್ಲಿ ಅಪರೂಪವಾಗಿದ್ದು, ಇದು ಆಫ್ರಿಕಾದಲ್ಲಿ ಅತ್ಯಂತ ಸಮೃದ್ಧವಾಗಿ ವಜ್ರಗಳು ಸಿಗುವ ಪ್ರದೇಶಗಳಲ್ಲಿ ಒಂದಾದ ಬೋಟ್ಸ್ವಾನಾದ ಕರೋವ್ ವಜ್ರದ ಗಣಿಯಲ್ಲಿ ಸಿಕ್ಕಿದೆ.

ಕೆನಡಾದ ಗಣಿಗಾರಿಕೆ ಕಂಪನಿಯಾದ ಲುಕಾರಾ ಈ ವಜ್ರವನ್ನ ಪತ್ತೆ ಮಾಡಿದ್ದು, ಇದು ರತ್ನ ಗುಣಮಟ್ಟಕ್ಕೆ ಸೇರಿದ ವಜ್ರವಾಗಿದ್ದು, ಸದ್ಯದ ಮಾಹಿತಿ ಪ್ರಕಾರ, ಕುಲ್ಲಿನಾನ್ ವಜ್ರದ ನಂತರ ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರ ಎನಿಸಿಕೊಂಡಿದೆ.

ಈ ವಜ್ರದ ಬಗ್ಗೆ ಸದ್ಯಕ್ಕೆ ಕಂಪನಿ ಕೊಟ್ಟಿರುವ ಮಾಹಿತಿ ಪ್ರಕಾರ, ಈ ಡೈಮಂಡ್‌ ಸುಮಾರು 2,492 ಕ್ಯಾರೆಟ್ ತೂಕದ್ದಾಗಿದೆ.

ಹಾಗಾಗಿಯೇ ಇದನ್ನ ವಿಶ್ವದ ಎರಡನೇ ಅತಿದೊಡ್ಡ ವಜ್ರ ಎಂದು ಪರಿಗಣಿಸಲಾಗಿದೆ. ಆಗಸ್ಟ್ 2024 ರಲ್ಲಿ ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಾರ್ಪ್ ಈ ಡೈಮಂಡ್‌ ಪತ್ತೆ ಹಚ್ಚಿದೆ.

ಇನ್ನು ವಿಶ್ವದ ಅತಿ ದೊಡ್ಡ ಮೊದಲ ಡೈಮಂಡ್‌ ಯಾವುದು ಎಂದು ನೋಡುವುದಾದರೆ ಅದು ಕುಲ್ಲಿನಾನ್ ವಜ್ರ. ಈ ವಜ್ರವು ಸುಮಾರು 3,106 ಕ್ಯಾರೆಟ್ ತೂಕದ್ದಾಗಿದೆ. ಇದನ್ನ ಸಹ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೇ ಪತ್ತೆ ಮಾಡಲಾಗಿತ್ತು.

ಇನ್ನು ಮುಂದಿನ ವರ್ಷಗಳಲ್ಲಿ ಈ ಡೈಮಂಡ್‌ ಬಹಳ ದೊಡ್ಡ ಮೊತ್ತಕ್ಕೆ ಮಾರಾಟ ಆಗುವ ಸಾಧ್ಯತೆ ಇದ್ದು, ಈ ವಜ್ರದ ಕಾರಣದಿಂದ ಬೋಟ್ಸ್ವಾನಾದ ಆರ್ಥಿಕತೆ ಬಲಪಡಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಶೇಕಡಾ 80 ಕ್ಕಿಂತ ಹೆಚ್ಚು ಪಟ್ಟು ಕೊಡುಗೆ ನೀಡುತ್ತದೆ ಎನ್ನಲಾಗು ತ್ತದೆ.ಆಫ್ರಿಕಾದಲ್ಲಿ ಪತ್ತೆಯಾದ ವಜ್ರ

ಈ ವಜ್ರ ಅಪರೂಪದಲ್ಲಿ ಅಪರೂಪವಾಗಿದ್ದು, ಇದು ಆಫ್ರಿಕಾದಲ್ಲಿ ಅತ್ಯಂತ ಸಮೃದ್ಧವಾಗಿ ವಜ್ರಗಳು ಸಿಗುವ ಪ್ರದೇಶಗಳಲ್ಲಿ ಒಂದಾದ ಬೋಟ್ಸ್ವಾನಾದ ಕರೋವ್ ವಜ್ರದ ಗಣಿಯಲ್ಲಿ ಸಿಕ್ಕಿದೆ.

ಕೆನಡಾದ ಗಣಿಗಾರಿಕೆ ಕಂಪನಿಯಾದ ಲುಕಾರಾ ಈ ವಜ್ರವನ್ನ ಪತ್ತೆ ಮಾಡಿದ್ದು, ಇದು ರತ್ನ ಗುಣಮಟ್ಟಕ್ಕೆ ಸೇರಿದ ವಜ್ರವಾಗಿದ್ದು, ಸದ್ಯದ ಮಾಹಿತಿ ಪ್ರಕಾರ, ಕುಲ್ಲಿನಾನ್ ವಜ್ರದ ನಂತರ ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರ ಎನಿಸಿಕೊಂಡಿದೆ.

ಈ ವಜ್ರದ ಬಗ್ಗೆ ಸದ್ಯಕ್ಕೆ ಕಂಪನಿ ಕೊಟ್ಟಿರುವ ಮಾಹಿತಿ ಪ್ರಕಾರ, ಈ ಡೈಮಂಡ್‌ ಸುಮಾರು 2,492 ಕ್ಯಾರೆಟ್ ತೂಕದ್ದಾಗಿದೆ.

ಹಾಗಾಗಿಯೇ ಇದನ್ನ ವಿಶ್ವದ ಎರಡನೇ ಅತಿದೊಡ್ಡ ವಜ್ರ ಎಂದು ಪರಿಗಣಿಸಲಾಗಿದೆ. ಆಗಸ್ಟ್ 2024 ರಲ್ಲಿ ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಾರ್ಪ್ ಈ ಡೈಮಂಡ್‌ ಪತ್ತೆ ಹಚ್ಚಿದೆ.

ಇನ್ನು ವಿಶ್ವದ ಅತಿ ದೊಡ್ಡ ಮೊದಲ ಡೈಮಂಡ್‌ ಯಾವುದು ಎಂದು ನೋಡುವುದಾದರೆ ಅದು ಕುಲ್ಲಿನಾನ್ ವಜ್ರ. ಈ ವಜ್ರವು ಸುಮಾರು 3,106 ಕ್ಯಾರೆಟ್ ತೂಕದ್ದಾಗಿದೆ. ಇದನ್ನ ಸಹ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೇ ಪತ್ತೆ ಮಾಡಲಾಗಿತ್ತು.

ಇನ್ನು ಮುಂದಿನ ವರ್ಷಗಳಲ್ಲಿ ಈ ಡೈಮಂಡ್‌ ಬಹಳ ದೊಡ್ಡ ಮೊತ್ತಕ್ಕೆ ಮಾರಾಟ ಆಗುವ ಸಾಧ್ಯತೆ ಇದ್ದು, ಈ ವಜ್ರದ ಕಾರಣದಿಂದ ಬೋಟ್ಸ್ವಾನಾದ ಆರ್ಥಿಕತೆ ಬಲಪಡಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಶೇಕಡಾ 80 ಕ್ಕಿಂತ ಹೆಚ್ಚು ಪಟ್ಟು ಕೊಡುಗೆ ನೀಡುತ್ತದೆ ಎನ್ನಲಾಗುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!