ಚನ್ನಮ್ಮನ ಕಿತ್ತೂರು ತಾಲ್ಲೂಕಿನ 3 ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ದಿನಾಂಕ : 28/12/2025 ರಂದು ಪೂಜ್ಯ ಡಾ. ಪಾಲಾಕ್ಷ ಶಿವಯೋಗಿಶ್ವರರು, ಶ್ರೀ ಅದೃಶ್ಯಾನಂದಾಶ್ರಮ ಸುಕ್ಷೇತ್ರ ಕಾದರವಳ್ಳಿ ಸರ್ವಾಧ್ಯಕ್ಷತೆಯಲ್ಲಿ ಮತ್ತು ಶ್ರೀ ಮಡಿವಾಳಯೋಗೀಂದ್ರ ಮಹಾಸ್ವಾಮಿಗಳು ಸಂಸ್ಥಾನ ಕಲ್ಮಠ ಚ. ಕಿತ್ತೂರು ಹಾಗೂ ಶ್ರೀ ಶಂಕರಯ್ಯ ಶಾಸ್ತ್ರಿಗಳು, ಉಳವಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಚನ್ನರಾಜ ಹಟ್ಟಿಹೊಳಿ ಮತ್ತು ಕಿತ್ತೂರಿನ ಮಾನ್ಯ ಶಾಸಕರಾದ ಬಾಬಾಸಾಹೇಬ ಪಾಟೀಲರು, ಶ್ರೀಮತಿ ಕೆ. ಎಂ. ಗಾಯತ್ರಿ ಆಡಳಿತಾಧಿಕಾರಿಗಳು ರಾಜ್ಯ ಕ.ಸಾ.ಪ, ಶ್ರೀಮತಿ ಮಂಗಳಾ ಮೆಟಗುಡ್ಡ ಜಿಲ್ಲಾ ಅಧ್ಯಕ್ಷರು ಬೆಳಗಾವಿ, ಎಸ.ಬಿ.ದಳವಾಯಿ ತಾಲ್ಲೂಕು ಅಧ್ಯಕ್ಷರು ಚ. ಕಿತ್ತೂರು, ಶ್ರೀ ಸಿ ವಾಯ್ ತುಬಾಕದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚ.ಕಿತ್ತೂರು, ಶ್ರೀ ಶಿವಾನಂದ ಗುಡಗನಟ್ಟಿ ಸಿ.ಪಿ.ಆಯ್ ಚ.ಕಿತ್ತೂರು, ಶ್ರೀ ಗಂಗಾಧರ ಕೋಟಗಿ,
ಶ್ರೀ ಡಾ. ಗಜಾನಂದ ಸೊಗಲನ್ನವರ ಹಾಗೂ ಅನೇಕ ಸಾಹಿತಿಗಳ ಉಪಸ್ಥಿತಿಯಲ್ಲಿ ಎಂ.ಕೆ.ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಹಲವು ಸಾಹಿತಿಗಳ ಪುಸ್ತಕ ಬಿಡುಗಡೆ ಹಾಗೂ ಸಾಹಿತಿಗಳಿಗೆ ಸನ್ಮಾನವನ್ನು ಮಾಡಲಾಯಿತು ಮತ್ತು ಮಾನ್ಯ ಶಾಸಕರು ತಮ್ಮ ಮಾತುಗಳಿಂದ ಕನ್ನಡ ಸಾಹಿತ್ಯದ ಮತ್ತು ಸಾಹಿತಿಗಳ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದರು ಹಾಗೂ ಸರ್ವಾಧ್ಯಕ್ಷರಾದ ಪೂಜ್ಯ ಪಾಲಾಕ್ಷ ಶಿವಯೋಗೀಶ್ವರರು ತಮ್ಮ ಮಾತುಗಳಲ್ಲಿ ಕನ್ನಡದ ಕಂಪು ಯಾವ ರೀತಿಯಲ್ಲಿ ಹರಡಿದೆ ಹಾಗೂ ಕಿತ್ತೂರು ತಾಲ್ಲೂಕು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಬಹಳ ವಿಸ್ತಾರವಾಗಿ ವಿವರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೊನೆಯದಾಗಿ ಕವಿಗಳಿಂದ ಕವಿಗೋಷ್ಠಿಯನ್ನು ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ : ಭರತ ಪವಾರ ಮತ್ತು ಶಿವಾನಂದ ಮಾವಿನಕೊಪ್ಪ




