Ad imageAd image

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 3ನೇ ಅತ್ಯಾಚಾರ ಪ್ರಕರಣ: ಆ.2ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

Bharath Vaibhav
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 3ನೇ ಅತ್ಯಾಚಾರ ಪ್ರಕರಣ: ಆ.2ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
WhatsApp Group Join Now
Telegram Group Join Now

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ರೇಪ್ ಕೇಸ್ನಲ್ಲಿ ಪೊಲೀಸರು ಪ್ರಜ್ವಲ್ ರೇವಣ್ಯರನ್ನು ಕೋರ್ಟಿಗೆ ಹಾಜರುಪಡಿಸಿದರು. ಬೆಂಗಳೂರಿನ ಜನಪ್ರತಿನಿಧಿಗಳು ನ್ಯಾಯಾಲಯಕ್ಕೆ ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಿದರು.

ಬ್ಲ್ಯಾಕ್ ಬೆಲ್ಟ್ ಧರಿಸಲು ಅನುಮತಿ ಕೋರಿ ಪ್ರಜ್ವಲ್ ರೇವಣ್ಣ ಪರ ವಕೀಲರು ಜಡ್ಜ್ ಗೆ ಮನವಿ ಮಾಡಿದರು. ತೀವ್ರ ಬೆನ್ನು ನೋವಿನ ಕಾರಣಕ್ಕೆ ಬ್ಯಾಕ್‌ ಬೆಲ್ಟ್ ಧರಿಸಬೇಕಿದೆ. ಜೈಲು ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡುವಂತೆ ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಎಸ್‌ಪಿಪಿ ಬಿಎನ್ ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು. ಮನವಿಗೆ ಪೂರಕವಾದ ವೈದ್ಯಕೀಯ ದಾಖಲೆ ಸಲ್ಲಿಸಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಜೈಲು ಆಸ್ಪತ್ರೆಯಲ್ಲಿ ವೈದ್ಯ ಸೌಲಭ್ಯಗಳಿಲ್ಲವೆಂದು ಪ್ರಜ್ವಲ್ ಪರ ವಕೀಲರು ಇದೆ ವೇಳೆ ವಾದಿಸಿದರು. ವಿಕ್ಟೋರಿಯಾ ಮತ್ತು ಇತರೆ ಸರ್ಕಾರಿ ಆಸ್ಪತ್ರೆಯಿಂದ ಅಭಿಪ್ರಾಯ ಪಡೆಯಲು ಜೈಲು ಅಧಿಕಾರಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿತು. ಎಂ ಆರ್ ಐ ಅಥವಾ ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ಪರೀಕ್ಷೆ ನಡೆಸಬೇಕು. ವೈದ್ಯಕೀಯ ವರದಿಯನ್ನು ಕೋರ್ಟಿಗೆ ಸಲ್ಲಿಸಲು ಜೈಲು ಅಧಿಕಾರಿಗಳಿಗೆ ಕೋಟ ಸೂಚನೆ ನೀಡಿತು. ವೈದ್ಯರು ಸೂಚಿಸಿದರೆ ಬ್ಲಾಕ್ ಬೆಲ್ಟ್ ಗೆ ಅನುಮತಿ ನೀಡಲು ಜಡ್ಜ್‌
ಸಂತೋಷ ಗಜಾನನ ಭಟ್‌ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ಆಗಸ್ಟ್ 2ಕ್ಕೆ ಮುಂದೂಡಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!