ಚಿಕ್ಕೋಡಿ : ನಗರದ ಪರಟ್ಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಅವರು ಮೈಸೂರು ಚಾಮುಂಡೇಶ್ವರಿ ದಿವ್ಯ ದರ್ಶನಕ್ಕಾಗಿ ಹೋಗಿರುತ್ತಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮದಲ್ಲಿ 400 ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬ್ಯಾಗ ವಿತರಿಸಲಾಯಿತು. ಅದೇ ರೀತಿ ಗಣೇಶ ಹುಕ್ಕೇರಿಯವರ ಪ್ರಯತ್ನದಿಂದ ಮವತ್ತೆರಡು ಕೋಟಿಗಳಲ್ಲಿ ಚಂದೂರ ಟೇಕ – ಸೈನಿಕ್ ಟಾಕಳಿ ಸೇತುವೆ ನಿರ್ಮಾಣ ಮಾಡಲಾಗಿದೆ.
ಅದೇ ರೀತಿ ಆರ್ ಎಚ್ ಎಲ್ ಡಿ ಕಾಲುವೆ ಯೋಜನೇ 250 ಕೋಟಿ ರೂಪಾಯಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮಹಾಲಕ್ಷ್ಮಿ ನೀರಾವರಿ ಯೋಜನೆ ಮಂಜೂರು ಮಾಡಿ , ಮೊದಲನೇ ಹಂತದಲ್ಲಿ 700 ಪೈಪಗಳು ಅಳವಡಿಸಲಾಗಿದೆ. ಅದೇ ರೀತಿ ಆರ್ ಹೆಚ್ ಎಲ್ ಡಿ ಯೋಜನೆ ಪೂರ್ಣಗೊಳಿಸಿ ಡಿಕೆ ಶಿವಕುಮಾರ್ ಅವರ ಹಸ್ತೆ ಉದ್ಘಾಟನೆ ಮಾಡಲಾಗದು. ಇದರ ಶ್ರೇಯಸು ಗಣೇಶ್ ಹುಕ್ಕೇರಿಅವರಿಗೆ ಸಲ್ಲುತ್ತದೆ ಎಂದರು.
ಜೋಡುಕುರಳಿಯ ಶ್ರೀ ಚಿದ್ದಗನಾನಂದ ಸ್ವಾಮೀಜಿ ಮಾತನಾಡಿ ನಮ್ಮ ಹುಟ್ಟುಹಬ್ಬ ಬೇರೆಯವರು ಆಚರಿಸಬೇಕು ಆ ತರಹ ಸಾಧನೆ ಮಾಡಬೇಕು. ನಮ್ಮ ಮಾತು ಸಾಧನೆ ಆಗಬಾರದು. ನಮ್ಮ ಸಾಧನೆ ನಮ್ಮ ಮಾತು ಇರ್ಬೇಕು. ಇತರ ಒಳ್ಳೆ ಕಾರ್ಯ ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಮಾಡಿದ್ದಾರೆ. ಅವರಿಗೆ ದೀರ್ಘಾಯುಷ್ಯ, ಸೇವೆ ಮಾಡುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಚಿಕ್ಕೋಡಿ ಶ್ರೀ ಸಂಪಾದನಾ ಮಹಾಸ್ವಾಮೀಜಿ ಮಾತನಾಡಿ ಜನ್ಮ ಆಕಸ್ಮಿಕ ಮೃತ್ಯು ನಿಶ್ಚಿತ. ಈ ನಡುವೆ ನಮ್ಮ ಜೀವನ ಆದರ್ಶವಾಗಬೇಕು.
ಬೇರೆಯವರಿಗೆ ಉಪಕಾರ ಮಾಡಬೇಕು ಅವಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮಗೆ ಸಮಾಜ ಏನು ನೀಡಿದೆ ಅನ್ನೋಕಿಂತ ನಾವು ಏನು ನೀಡಿದ್ದೇವೆ ಮಹತ್ವದ್ದು. ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಪ್ರಕಾಶ್ ಕೆರೆಯವರು ಸುಮ್ನೆ ಕೂತ್ಕೊಳ್ಳಕ್ ಆಗ್ತಾ ಇಲ್ಲ. ಆರೋಗ್ಯ ಸರಿ ಇರಲಿಲ್ಲ ಅಂದ್ರು ಅವರು ಬಂದಿದ್ದಾರೆ.
ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಐಎಎಸ್ ಆಗ್ಬೇಕು ಅದಕ್ಕಾಗಿ ಅವಶ್ಯಕತೆ ಸಹಾಯ ಹುಕ್ಕೇರಿ ತಂದೆ ಮಗ ಮಾಡುತ್ತಾರೆ. ಮಾತು ಕಡಿಮೆ ಕೆಲಸ ಹೆಚ್ಚು ಗಣೇಶ್ ಹುಕ್ಕೇರಿ ಯವರು ಮಾಡಿದಾರೆ ಎಂದರು.
ಈ ಸಂದರ್ಭದಲ್ಲಿ ಸೋನಾಕ್ಷಿ ಗಣೇಶ ಹುಕ್ಕೇರಿ, ಅದ್ವಿಕ್ ಗಣೇಶ್ ಹುಕ್ಕೇರಿ, ಪುರಸಭೆ ಉಪಾಧ್ಯಕ್ಷ ಇರ್ಫಾನ್ ಬೆಪಾರಿ, ಗುಲಾಬ್ ಬಾಗವಾನ್ , ಅನಿಲ ಪಾಟೀಲ್, ರಾಮ ಮಾನೆ, ಚಿಕ್ಕೋಡಿ ತಹಸಿಲ್ದಾರ್ ಸಿ ಎಸ್ ಕುಲಕರ್ಣಿ , ಬಿಇಒ ಪ್ರಭಾವತಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜನಪ್ರತಿನಿಧಿಗಳು, ವಿವಿಧ ಸಂ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




