—————————————————–ಪಲ್ಲಕ್ಕಿ ಉತ್ಸವ, ನಿರಂತರ ಭಕ್ತರ ದಂಡು!!.
ನಿಪ್ಪಾಣಿ: ಕೊಲ್ಲಾಪುರದ ಮಹಾಲಕ್ಷ್ಮಿಗೆ ನವರಾತ್ರಿಯ ಸಂಭ್ರಮದಲ್ಲಿಯ 6ನೇ ದಿನ ಶನಿವಾರ ಸಂಜೆ ಮಹಾಲಕ್ಷ್ಮಿಗೆ ಗಜಾರೂಢಾಸನ ಅಲಂಕಾರ ಪೂಜೆ ನಡೆಯಿತು.

ಅಶ್ವಿನ ಶುದ್ಧ ಪಂಚಮಿ ದಿನಾಂಕ 27ರಂದು ಬೆಳಿಗ್ಗೆಯಿಂದಲೇ ವಿವಿಧ ರಾಜ್ಯಗಳಿಂದ ಭಕ್ತರ ದಂಡು ಆಗಮಿಸುತ್ತಿತ್ತು. ಮಂದಿರದಲ್ಲಿ ಜನದಟ್ಟನೆ ನಿಯಂತ್ರಣಕ್ಕಾಗಿ ದೇವಸ್ಥಾನ ಸಮಿತಿಯ ಸೇವಕರು, ಪೊಲೀಸರು, ಶ್ರಮವಹಿಸಿದ್ದರು. ಮಂದಿರ ಪರಿಸರ ಸ್ವಚ್ಛತೆಯ ಜೊತೆಗೆ ಭಕ್ತರಿಗೆ ಸಕಾಲಕ್ಕೆ ದೇವಿಯ ದರ್ಶನ ಅನುಕೂಲಕ್ಕಾಗಿ ಸರದಿಯಲ್ಲಿಯೇ ಶಿಸ್ತು ಬದ್ಧವಾಗಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು.

ಶನಿವಾರ ಹಾಗೂ ರವಿವಾರ ಸರ್ಕಾರಿ ಕಾರ್ಯಾಲಯಗಳಿಗೆ ರಜೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಶನಿವಾರದ ಅಲಂಕಾರ ಗಜಾರೂಢ ಮಹಾಲಕ್ಷ್ಮಿಯ ದರ್ಶನಕ್ಕಾಗಿ ವಿವಿಧ ರಾಜ್ಯಗಳಿಂದ 60 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದರು. ರಾತ್ರಿ ಎಂಟು ಗಂಟೆಯಿಂದ ಮಹಾಲಕ್ಷ್ಮಿ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು.
ವರದಿ: ಮಹಾವೀರ ಚಿಂಚಣೆ




