Ad imageAd image

77ನೇ ಗಣರಾಜ್ಯೋತ್ಸವ ಕುಡಹಳ್ಳಿ ಸರ್ಕಾರಿ ಶಾಲೆ  ವಿಜೃಂಭಣೆಯಿಂದ  ಆಚರಿಸಲಾಯಿತು

Bharath Vaibhav
77ನೇ ಗಣರಾಜ್ಯೋತ್ಸವ ಕುಡಹಳ್ಳಿ ಸರ್ಕಾರಿ ಶಾಲೆ  ವಿಜೃಂಭಣೆಯಿಂದ  ಆಚರಿಸಲಾಯಿತು
WhatsApp Group Join Now
Telegram Group Join Now

ಕಾಳಗಿ : ತಾಲೂಕು ಕುಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಮಹತ್ವ ಕುರಿತು ಮಾತನಾಡಿದರು. ಅಲ್ಲದೇ ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ರಾಷ್ಟ್ರಿಯ ಹಬ್ಬಗಳ ಮಹತ್ವ, ಶಿಕ್ಷಕರ ಬೋಧನೆ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಕುರಿತು ಬಸವರಾಜ ಪಾಟೀಲ ಮುಕರಂಬಿ ಅವರು ಮಾತನಾಡಿ, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಣ್ಣಾರವ್ ಶಿವುದೇ, ಅಶೋಕ ಗುತ್ತೇದಾರ, ಸಿದ್ದು ಹೂಗಾರ, ಪಿತಾಮರಾವ್ ಶಿವುದೇ, ಬಸವರಾಜ ಭಕ್ತಂಪಳ್ಳಿ, ಧೂಳಪ್ಪ ನಾಟಿಕಾರ್, ಮಲ್ಲಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!