ಕಲಘಟಗಿ:– ತಾಲ್ಲೂಕಿನ ಮುತ್ತಗಿ ಗ್ರಾಮದ ಹತ್ತಿರ ಶ್ರೀಗಂಧದ ಕಟ್ಟಿಗೆ ತುಂಡು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ವೇಳೆ ಅರಣ್ಯಧಿಕಾರಿಗಳು ದಾಳಿ ನಡೆಸಿದಾಗ ಕಟ್ಟಿಗೆ ತುಂಡು ಅರಣ್ಯ ಪಾಲಕರ ಕಾಲಿನ ಮೇಲೆ ಎಸೆದು ಆರೋಪಿಗಳು ಪರಾರಿಯಾದ ಘಟನೆ ಜರುಗಿದೆ.
ಅರಣ್ಯಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗಿನ ಜಾವ ದಾಳಿ ನಡೆಸಿದ್ದು ಮುತ್ತಗಿ ಗ್ರಾಮದ ಕೆವಿಜಿ ಬ್ಯಾಂಕ್ ಹತ್ತಿರದ ರಸ್ತೆಯಲ್ಲಿ ಶ್ರೀಗಂಧದ ಕಟ್ಟಿಗೆಯ ಸಣ್ಣ ತುಂಡುಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಮೂವರು ಜನರು ದ್ವಿಚಕ್ರ ವಾಹನದ ಮೇಲೆ ತೆಗೆದುಕೊಂಡು ಸಾಗಿಸುತ್ತಿರುವಾಗ ದಾಳಿ ನಡೆಸಿದ್ದಾರೆ.ಆರೋಪಿಗಳ ತಡೆದಾಗ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಗಳ ಮೇಲೆ ಕಟ್ಟಿಗೆ ತುಂಡು ಎಸೆದು ಪರಾರಿಯಾಗಿದ್ದು ಕಾಲಿಗೆ ಸಣ್ಣ ಪುಟ್ಟ ಗಾಯಗಳು ಆಗಿವೆ ಎಂದು ಅರಣ್ಯ ಪಾಲಕರ ತಿಳಿಸಿದರು.
ನಂತರ ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ಮಾತನಾಡಿ
10 ರಿಂದ 12 ಕೆಜಿ ಶ್ರೀಗಂಧದ ತುಂಡುಗಳು ಸಿಕ್ಕಿದ್ದು ಅಂದಾಜು 25 ರಿಂದ 30 ಸಾವಿರ ಬೆಲೆ ಬಾಳುತ್ತವೆ ಸಿಬ್ಬಂದಿಗಳು ದಾಳಿ ನಡೆಸಿದಾಗ ಕಾಲಿನ ಮೇಲೆ ತುಂಡುಗಳ ಎಸೆದು ಪರಾರಿಯಾದ ಮೂವರು ಆರೋಪಿಗಳ ಸಿಡಿಆರ್ ಮೂಲಕ ಮಾಹಿತಿ ಕಲೆ ಹಾಕಿ ಬಂಧಿಸಲಾಗುವದು ಎಂದರು.
ಈ ತರಹದ ಶ್ರೀಗಂಧದ ತುಂಡುಗಳು ಅರಣ್ಯ ಪ್ರದೇಶದಲ್ಲಿ ಸಿಗುವದು ಅಪರೂಪ ಇವರು ಬೇರೆ ಕಡೆ ತಂದಿರಬಹುದು.
ಇವರು ಒಂದು ಕಡೆ ಸಂಗ್ರಹಿಸಿ ನಂತರ ಬೇರೆ ಕಡೆ ಸಾಗಾಟ ಮಾಡುತ್ತಾರೆ ಎಂಬ ಮಾಹಿತಿ ಇದೆ ಆದಷ್ಟು ಬೇಗ ಆರೋಪಿಗಳ ಪತ್ತೆ ಹಚ್ಚಲಾಗುವದು ಎಂದು ಮಾಹಿತಿ ನೀಡಿದರು.ಕಾರ್ಯಾಚರಣೆಯಲ್ಲಿ ಅರಣ್ಯ ಪಾಲಕರಾದ ಶಿವಾನಂದ ಮಾದರ,ರಾಮಗೊಂಡ ಡೈರ್ಫೋ,ಗುರುರಾಜ, ಅಪ್ಪಾಸಾಹೇಬ, ಮಂಜು, ನಾಗರಾಜ,ಮೂಶಿನ್ ಹಾಗೂ ಇನ್ನಿತರ ಸಿಬ್ಬಂದಿಗಳು ಇದ್ದರು.
ವರದಿ : ಶಶಿಕುಮಾರ ಕಲಘಟಗಿ