Ad imageAd image

ಎಸ್ ಎಸ್ ಎಲ್ ಸಿ ಯಲ್ಲಿ ಆದರ್ಶ ಶಾಲೆಯ ವಿಧ್ಯಾರ್ಥಿಗಳ ಸಾಧನೆ

Bharath Vaibhav
ಎಸ್ ಎಸ್ ಎಲ್ ಸಿ ಯಲ್ಲಿ ಆದರ್ಶ ಶಾಲೆಯ ವಿಧ್ಯಾರ್ಥಿಗಳ ಸಾಧನೆ
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿ ಐಗಳಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಶಾಲೆಯ 2024/25 ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶದಲ್ಲಿ ಆದರ್ಶ ಶಾಲೆಯ ಮಕ್ಕಳು ಅಪರೂಪದ ಸಾಧನೆ ಮಾಡಿದ್ದಾರೆ ಕು. ಸೋನಾಲಿ ರಾ ನಾಯಿಕ 625/ 617 ಅಂಕ ಪಡೆದು 98.72% ಪ್ರಥಮ ಸ್ಥಾನ ಪಡೆದುಕೊಡಿದ್ದಾಳೆ ಕು. ಭಾಗ್ಯಶ್ರೀ ಹೀರೇಮಠ 625/ 607 ಅಂಕ ಪಡೆದು 97.12% ದ್ವೀತೀಯ ಸ್ಥಾನ ಪಡೆದುಕೊಂಡಿದ್ದಾಳೆ ಕು.ಸುಹಾಲಿ ಮುಜಾವರ 635/606 ಅಂಕ ಪಡೆದು 96.80% ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶಾಲೆ ಮುಖ್ಯಸ್ಥ ಅಪ್ಪಸಾಬ ಪಾಟೀಲ ಅವರು ತಿಳಿಸಿದ್ದಾರೆ.

ಈ ವರ್ಷ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ವೆಬ್ಬ ಕ್ಯಾಮರ ಇದ್ದರೂ ಕೂಡ ಆದರ್ಶ ಶಾಲೆಯ ಮಕ್ಕಳು ಪ್ರತಿ ವರ್ಷದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಆದರ್ಶ ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದಕ್ಕೆ ಶಿಕ್ಷಕರ ಸತತ ಪ್ರಯತ್ನ, ಆಡಳಿತ ಮಂಡಳಿ ಸಹಕಾರ ದಿಂದ ಈ ಸಾಧನೆ ಮಾಡಿದ್ದಾರೆ ಅದರಂತೆ ಆದರ್ಶ ಶಾಲೆಯಲ್ಲಿ ಪ್ರತಿ ವರ್ಷ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳಿಗೆ ವಿಶೇಷವಾದ ಕಾಳಜಿ ಪಾಲಕರ ಸಭೆ, ಮನೆ ಮನೆಗೆ ಭೇಟಿ ನೀಡಿದ ಫಲ ದಿಂದ ಹಾಗೂ ಮಕ್ಕಳ ಸ್ಫೂರ್ತಿ
ಯಿಂದ ಇದು ಸಾಧ್ಯವಾಗಿದೆ. ಬರುವ ವರ್ಷದಲ್ಲಿ ಇನ್ನು ಹೆಚ್ಚಿನ ಜವಾಬ್ದಾರಿ ವಹಿಸಿ ರಾಜ್ಯಕ್ಕೆ ರ್ಯಾಂಕ್ ಪಡೆದುಕೊಳ್ಳಲು ಮಕ್ಕಳನ್ನು ತಯಾರು ಮಾಡುತ್ತೇವೆ.

ಇದೇ ರೀತಿ ಪಾಲಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಲೆ ಆಡಳಿತ ಮಂಡಳಿ ತಿಳಿಸಿದೆ. ಇದರ ಜೊತೆಗೆ ಈ ವರ್ಷದಿಂದ ಆದರ್ಶ ಡ್ರೋಣಾಸ್ ಸಂಸ್ಥೆಯ ವತಿಯಿಂದ ಪಿಯುಸಿ ಪ್ರಥಮ ಹಾಗೂ ದ್ವೀತಿಯ ತರಗತಿ ಆಡಸ್ ಮತ್ತು ಕಾಮರ್ಸ್ ಪಡೆಯುವ ವಿಧ್ಯಾರ್ಥಿಗಳಿಗೆ ಅಗ್ನೀವೀರ ಹಾಗೂ ಸೈನಿಕ ಶಾರೀರಿಕ ಹಾಗೂ ಪರೀಕ್ಷೆ ತರಬೇತಿಯನ್ನು ನೀಡುತ್ತಿದ್ದಾರೆ ಗ್ರಾಮೀಣ ಪ್ರದೇಶಗಳಲ್ಲಿ ಈ ತರಹ ಶಿಕ್ಷಣ ಸಂಸ್ಥೆಗಳು ಸಿಗುವುದು ಅಪರೂಪವಾಗಿದ್ದು ನಿಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಲು ಈ ತರಹ ಶಿಕ್ಷಣ ಸಂಸ್ಥೆಗಳು ಅಗತ್ಯವಾಗಿವೆ ಇಲ್ಲಿ ಒಂದನೇಯ ತರಗತಿಯಿಂದ ಎಸ್ ಎಸ್ ಎಲ್ ಸಿ ವರಿಗೆ ಕನ್ನಡ ಮಾಧ್ಯಮ ಹಾಗೂ ಎಲ್ ಕೆ ಜಿ. ಯು ಕೆ ಜಿ .ಒಂದನೇಯ ತರಗತಿಯಿಂದ 5 ನೇ ತರಗತಿಯವರಿಗೆ ಆಗ್ಲ ಮಾಧ್ಯಮ ಕೂಡಾ ಇದೆ. ಹಾಗೂ ಎಲ್ಲ ತರಗತಿಯ ವಿಧ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಸಹ ಇದೆ. ಶಾಲೆಯಲ್ಲಿ ಆತ್ಯಂತ ನುರಿತ ಶಿಕ್ಷಕರು,ಶಿಕ್ಷಕೀಯರು ಇದ್ದು ಪ್ರತಿ ಮಗವಿನ ಬಗ್ಗೆ ಕಾಳಜಿ ವಹಿಸುತ್ತಾರೆ ಇವತ್ತೆ ಐಗಳಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!