ಬೆಂಗಳೂರು : ವಿಜಯ ನಗರ ಸಾಮ್ರಾಜ್ಯದ ಆಡಳಿತದಿಂದ ಪ್ರಭಾವಿತರಾಗಿದ್ದ ನಾಡ ಪ್ರಭು ಆಡಳಿತವು ಇಂದಿಗೂ ಮಾದರಿ ಎಂದು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಮಾಜಿ ಪಾಲಿಕೆ ಸದಸ್ಯ ಕೆ. ನಾಗಭೂಷಣ್ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಅಬ್ಬಿಗೆರೆ ಬಿಬಿಎಂಪಿ ಕಚೇರಿ ಆವರಣದಲ್ಲಿ ಇರುವ ಬೃಹತ್ ಗಾತ್ರದ ನಿರ್ಮಾತೃ ನಾಡ ದೊರೆ ಕೆಂಪೇಗೌಡರ 516ನೇ ಜಯಂತಿ ನಿಮಿತ್ತ ಕೆಂಪೆಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೆ ನಾಗಭೂಷಣ್ ಮಾತನಾಡಿದರು.
ಕೆಂಪೇಗೌಡರು ಅಂದಿನ ಕಾಲದಲ್ಲಿಯೇ ನೀರಿನ ಹಾಗೂ ಮಣ್ಣಿನ ಮಹತ್ವ ತಿಳಿದಿದ್ದರು. ವೈಜ್ಞಾನಿಕವಾಗಿ ಅನೇಕ ಕೆರೆ- ಕಟ್ಟೆಗಳನ್ನು ನಿರ್ಮಿಸಿದ ಕೀರ್ತಿ ನಾಡ ಪ್ರಭು ಕೆಂಪಗೆ ಗೌಡರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಹಿರಿಯ ರಾಜಕಾರಣಿ ಅಬ್ಬಿಗೆರೆ ರಾಜಣ್ಣ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಮುಖಂಡ ವಿಶ್ವನಾಥ್, ಮಾಜಿ ನಗರ ಸಭಾ ಅಧ್ಯಕ್ಷ ಕೆ ಸಿ ಅಶೋಕ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಅಬ್ಬಿಗೆರೆ ಸಮಸ್ತ ನಾಗರಿಕರು ಮುಂತಾದವರು ಇದ್ದರು.